ಮಡಿಕೇರಿ, ಏ. 20: ಮಂಗಳೂರಿನ ಎ.ಜೆ. ಮೆಡಿಕಲ್ ಕಾಲೇಜ್‍ನಲ್ಲಿ ವೈದ್ಯಕೀಯ ಪದವಿ ಪರೀಕ್ಷೆಯಲ್ಲಿ ನಾಲ್ಕು ಚಿನ್ನದ ಪದಕ ಪಡೆದಿರುವ ಡಾ. ಮೋನಿಕಾ ಆಚಾರ್ಯ ಅವರನ್ನು ಮಡಿಕೇರಿಯ ವಿಶ್ವಕರ್ಮ ಸೇವಾ ಸಂಘ ಹಾಗೂ ವಿಶ್ವಕರ್ಮ ಮಹಿಳಾ ಸಂಘದ ವತಿಯಿಂದ ಗೌರವಿಸಲಾಯಿತು.

ಸಂಘದ ಅಧ್ಯಕ್ಷ ಬಿ.ಸಿ. ಮೋಹನ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿ.ಸಿ. ಶ್ರೀಧರ ಆಚಾರ್ಯ ಅವರು ರೂ. 10 ಸಾವಿರ ಪ್ರೋತ್ಸಾಹ ಧನ ನೀಡಿ ಗೌರವಿಸಿದರು. ಮೋನಿಕಾ ಮಡಿಕೇರಿಯ ದಮಯಂತಿ ಹಾಗೂ ರಾಮಚಂದ್ರ ಆಚಾರ್ಯ ಅವರ ಪುತ್ರಿ.