ಶನಿವಾರಸಂತೆ, ಏ. 20: ಸಮೀಪದ ಮುಳ್ಳೂರು ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಬಣ್ಣಬಣ್ಣದ ಕುಂಚ ಹಿಡಿದು ತಮ್ಮ ತಮ್ಮ ಭಾವನೆಗಳಿಗೆ ತಮ್ಮ ತಮ್ಮದೇ ಶೈಲಿಯಲ್ಲಿ ಬಣ್ಣ ಹಚ್ಚುವ ಮೂಲಕ ಮಕ್ಕಳು ಚಿತ್ರಕಲಾ ಶಿಬಿರವನ್ನು ಅರ್ಥಪೂರ್ಣವಾಗಿ ಆಚರಿಸಿದರು. ಮರ, ಗಿಡ, ಬೆಟ್ಟ-ಗುಡ್ಡ, ಪ್ರಾಣಿ, ಪಕ್ಷಿ, ಕೀಟ ಹೀಗೆ ಹತ್ತು ಹಲವು ಚಿತ್ರಗಳನ್ನು ಬಿಡಿಸಿ, ಬಣ್ಣ ಹಚ್ಚಿ ಸಂಭ್ರಮಿಸಿದರು.

ಅಂಕನಹಳ್ಳಿಯ ಪ್ರೌಢಶಾಲೆ ಮುಖ್ಯ ಶಿಕ್ಷಕ ಹೇಮಂತ್ ವಿದ್ಯಾರ್ಥಿಗಳಿಗೆ ಉಚಿತವಾಗಿ ಚಿತ್ರಕಲಾ ಸಾಮಗ್ರಿಗಳನ್ನು ವಿತರಿಸಿದರು. ಮಾರ್ಗದರ್ಶಕ ಶಿಕ್ಷಕ ಸಿ.ಎಸ್. ಸತೀಶ್ ಮಾತನಾಡಿ, ಶಿಕ್ಷಣದಲ್ಲಿ ಬುನಾದಿ ಹಂತದಿಂದಲೂ ಚಿತ್ರಕಲಾ ಶಿಕ್ಷಣಕ್ಕೆ ಪ್ರಾಧಾನ್ಯತೆ ನೀಡಬೇಕು. ಭಾಷಾ ಸಾಹಿತ್ಯ ಕೇವಲ ವಿಷಯ ಸಾಮಥ್ರ್ಯವನ್ನು ಹೆಚ್ಚಿಸುತ್ತದೆ. ಚಿತ್ರಕಲಾ ಅಭ್ಯಾಸವೂ ಆಕಾರ, ಅಳತೆ, ಪ್ರಮಾಣ, ಕಲ್ಪನೆಗಳ ಜೊತೆಗೆ ಚಿಂತನಾ ಸಾಮಥ್ರ್ಯವನ್ನು ಬೆಳೆಸುತ್ತದೆ ಎಂದರು. ಹಂಡ್ಲಿ ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಮಧುಕುಮಾರ್ ಮಾರ್ಗದರ್ಶನ ನೀಡಿದರು.