ಚೆಟ್ಟಳ್ಳಿ, ಏ. 20: ಬರಹಗಾರ್ತಿ ಉಳುವಂಗಡ ಕಾವೇರಿ ಉದಯ ಬರೆದ ಕೊಡವ ಮಕ್ಕಡ ಕೂಟ ಹೊರತಂದಿರುವ 23 ಹಾಗೂ 24ನೇ ಹೆಜ್ಜೆಯ ‘ಕೊಡಗ್‍ರ ಸಿಪಾಯಿ’ ಹಾಗೂ ‘ಚಿಗುರೆಲೆಗಳು’ ಪುಸ್ತಕ ಬಿಡುಗಡೆ ಕಾರ್ಯಕ್ರಮ ಟಿ. ಶೆಟ್ಟಿಗೇರಿಯಲ್ಲಿ ನೆರವೇರಿತು.
ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ. ಅಯ್ಯಪ್ಪ ಅವರ ಅಧ್ಯಕ್ಷತೆಯಲ್ಲಿ ದಕ್ಷಿಣ ಕೊಡಗಿನ ಟಿ. ಶೆಟ್ಟಿಗೇರಿಯ ಕಾಯಂಕೊಲ್ಲಿಯ ಮಚ್ಚಮಾಡ ರಮೇಶ್ ಅವರ ಮನೆಯಲ್ಲಿ ನಡೆದ ಕೊಡವ ವರ್ಷದ ಮೊದಲ ದಿನವಾದ ಎಡಮ್ಯಾರ್1 ಆಚರಣೆಯಲ್ಲಿ ಕೊಡಗಿನವರಾದ ನಟ ಹಾಗೂ ಹಲವು ಚಿತ್ರಗಳನ್ನು ನಿರ್ದೇಶಿಸಿರುವ ಕೊಟ್ಟ್‍ಕತ್ತಿರ ಪ್ರಕಾಶ್ ಕಾರ್ಯಪ್ಪ ಪ್ರಾಯೋಜಿಸಿರುವ, ಬರಹಗಾರ್ತಿ ಉಳುವಂಗಡ ಕಾವೇರಿ ಉದಯ ಬರೆದಿರುವ ‘ಕೊಡಗ್‍ರ ಸಿಪಾಯಿ’ ಪುಸ್ತಕವನ್ನು ಹಿರಿಯ ಸಮಾಜ ಸೇವಕ ಮಚ್ಚಮಾಡ ಸೋಮಯ್ಯ ಬಿಡುಗಡೆಗೊಳಿಸಿದರು. ಬಳಿಕ ಮಾತನಾಡಿ, ಕೊಡವ ಮಕ್ಕಡ ಕೂಟವು ಕೊಡವ ಸಂಸ್ಕøತಿ ಉಳಿಸುವಲ್ಲಿ ಹಲವು ಕಾರ್ಯಕ್ರಮ ಗಳನ್ನು ಮಾಡುತ್ತಿರುವದು ಹೆಮ್ಮೆಯ ವಿಷಯವೆಂದರು. ಉಳುವಂಗಡ ಕಾವೇರಿ ಉದಯ ಬರೆದಿರುವ ‘ಚಿಗುರೆಲೆಗಳು’ ಪುಸ್ತಕವನ್ನು ಕರ್ನಾಟಕ ರಾಜ್ಯ ರೈತ ಸಂಘದ ಕೊಡಗು ಘಟಕದ ಅಧ್ಯಕ್ಷ ಚಿಮ್ಮಂಡ ಗಣೇಶ್ ಬಿಡುಗಡೆ ಗೊಳಿಸಿದರು. ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ. ಅಯ್ಯಪ್ಪ ಅವರ ಮಕ್ಕಡ ಕೂಟದ ವತಿಯಿಂದ ಹಲವು ದಾಖಲೀಕೃತ ಪುಸ್ತಕವನ್ನು ಪ್ರಕಟಿಸುತ್ತಿದ್ದು, 23 ಹಾಗೂ 24ನೇ ಪುಸ್ತಕ ಇದಾಗಿದೆ ಎಂದರು. ಕೊಡಗು ಪ್ರೆಸ್‍ಕ್ಲಬ್‍ನ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಮಾತನಾಡಿ, ಬರಹ ಗಾರ್ತಿಯಾಗಿ ಹೆಸರುಗಳಿಸುತ್ತಿರುವ ಉಳುವಂಗಡ ಕಾವೇರಿ ಉದಯ ಅವರನ್ನು ಶ್ಲಾಘಿಸಿದರು. ಉಳುವಂಗಡ ಕಾವೇರಿ ಉದಯ ಮಾತನಾಡಿ, ಪುಸ್ತಕ ಬಿಡುಗಡೆಗೆ ಕಾರಣಕರ್ತರಾದ ಕೊಡವ ಮಕ್ಕಡ ಕೂಟಕ್ಕೆ ಅಭಿನಂದಿಸಿ ದಾನಿಗಳು ಮುಂದೆ ಬಂದರೆ ಇನ್ನೂ ಹಲವು ಪುಸ್ತಕಗಳನ್ನು ಬರೆಯುವದಾಗಿ ತಿಳಿಸಿದರು.
ಈ ಸಂದರ್ಭ ಕೊಡವ ವiಕ್ಕಡ ಕೂಟದ ಉಪಾಧ್ಯಕ್ಷ ಚೆಪ್ಪುಡಿರ ರಾಕೇಶ್ ದೇವಯ್ಯ, ಕಾರ್ಯದರ್ಶಿ ಪುತ್ತರಿರ ಕರುಣ್ ಕಾಳಯ್ಯ, ಬೊಳ್ಳಜಿರ ಸುಶಿ ಅಶೋಕ್, ಮಚ್ಚಮಾಡ ರಮೇಶ್ ಹಾಜರಿದ್ದರು.