ಮಡಿಕೇರಿ, ಏ. 20: ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯದ ಸಹಯೋಗದೊಂದಿಗೆ ಸಂಸ್ಥೆಯ ಬೋಧಕ ವೈದ್ಯರಿಗೆ ವೈದ್ಯಕೀಯ ಕೌಶಲ್ಯಗಳ ಬಗ್ಗೆ ವೈದ್ಯಕೀಯ ಶಿಕ್ಷಣ ಘಟಕದಿಂದ ತಾ. 22 ಮತ್ತು 23ರಂದು ಕಾರ್ಯಾಗಾರ ನಡೆಯಲಿದೆ ಎಂದು ಸಂಸ್ಥೆಯ ವೈದ್ಯಕೀಯ ಶಿಕ್ಷಣ ಘಟಕದ ಕಾರ್ಯದರ್ಶಿ ಡಾ. ರವಿಕಿರಣ್ ಕಿಸಾನ್ ಅವರು ತಿಳಿಸಿದ್ದಾರೆ.