ಮಡಿಕೇರಿ, ಏ.20: ಮಡಿಕೇರಿ ನಗರ ವ್ಯಾಪ್ತಿಯಲ್ಲಿ ತುರ್ತು ನಿರ್ವಹಣೆ ಕಾರ್ಯವನ್ನು ನಿರ್ವಹಿಸಬೇಕಿರುವದರಿಂದ ತಾ. 22 ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ವಿದ್ಯುತ್ ಸರಬರಾಜು ಸ್ಥಗಿತಗೊಳಿಸಲಾಗುವದು.
ಆದ್ದರಿಂದ, ಗೌಡ ಸಮಾಜ, ಓಂಕಾರೇಶ್ವರ ದೇವಸ್ಥಾನ, ಅಬ್ಬಿಫಾಲ್ಸ್ ರಸ್ತೆ, ಎ.ವಿ.ಶಾಲೆ, ಮಾರ್ಕೆಟ್, ರಾಣಿಪೇಟೆ, ಕಾನೆÀ್ವಂಟ್ ಜಂಕ್ಷನ್, ಬೋಯಿಕೇರಿ, ಗಾಳಿಬೀಡು, ಹೆಬ್ಬೆಟ್ಟಗೇರಿ, ಮಕ್ಕಂದೂರು, ಮುಕ್ಕೋಡ್ಲು ಕುಂಡಾಮೇಸ್ತ್ರಿ ಸುತ್ತಮುತ್ತ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಸೆಸ್ಕ್ ಪ್ರಕಟಣೆ ತಿಳಿಸಿದೆ.