ಮಡಿಕೇರಿ, ಏ. 20: ಕಾನೂನು ಮಾಪನ ಶಾಸ್ತ್ರ ಇಲಾಖೆ, ಮಡಿಕೇರಿ ಇವರ ವತಿಯಿಂದ ತಾತ್ಕಾಲಿಕ ಸತ್ಯಾಪನೆ ಮುದ್ರೆ ಶಿಬಿರ ತಾ. 22 ರಿಂದ 30 ರವರೆಗೆ ನಾಲ್ಕೇರಿ ಜಂಕ್ಷನ್ ಮಣಿ ಕಾಂಪ್ಲೆಕ್ಸ್, ಶ್ರೀಮಂಗಲದಲ್ಲಿ ಏರ್ಪಡಿಸಲಾಗಿದೆ.
ಉಪಯೋಗಿಸುವ ಅಳತೆ, ತೂಕ ಮತ್ತು ತೂಕದ ಸಾಧನಗಳನ್ನು ಜನರು ಹಾಜರುಪಡಿಸಿ ಸತ್ಯಾಪನೆ ಮುದ್ರೆ ಮಾಡಿಸುವಂತೆ ಪ್ರಕಟಣೆ ತಿಳಿಸಿದೆ.