ಸೋಮವಾರಪೇಟೆ, ಏ. 20: ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನಲ್ಲಿ ಸ್ಥಾಪಿಸಲಾಗಿರುವ ‘ಗೊರುಚ ದತ್ತಿ ನಿಧಿಯ ಅಂಗವಾಗಿ 2018 ರಲ್ಲಿ ಮೊದಲ ಆವೃತ್ತಿಯಾಗಿ ಪ್ರಕಟವಾಗಿರುವ ‘ವಚನ ಸಾಹಿತ್ಯ-ಸಂಶೋಧನೆ’ ಮತ್ತು ‘ಜನಪದ ಸಾಹಿತ್ಯ-ಸಂಶೋಧನೆ’ ಕುರಿತಾದ ಎರಡು ಗ್ರಂಥಗಳಿಗೆ ತಲಾ 10 ಸಾವಿರ ರೂಪಾಯಿಗಳ ನಗದು ಪುರಸ್ಕಾರ ಮತ್ತು ಫಲಕಗಳನ್ನು ನೀಡಿ ಗೌರವಿಸಲಾಗುತ್ತಿದ್ದು, ಆಸಕ್ತ ಲೇಖಕರಿಂದ ಗ್ರಂಥ ಅಹ್ವಾನಿಸಲಾಗಿದೆ ಎಂದು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಎಸ್. ಮಹೇಶ್ ತಿಳಿಸಿದ್ದಾರೆ.

ಪುರಸ್ಕಾರಕ್ಕಾಗಿ ಕಳುಹಿಸುವ ‘ವಚನ ಸಾಹಿತ್ಯ-ಸಂಶೋಧನೆ’ ಮತ್ತು ‘ಜನಪದ ಸಾಹಿತ್ಯ-ಸಂಶೋಧನೆ’ ಕುರಿತ ಗ್ರಂಥಗಳು ಸ್ವರಚನೆಯಾಗಿರಬೇಕು. ಸಂಪಾದನಾ ಕೃತಿಗಳು ಮತ್ತು ಯಾವದೇ ಪದವಿಗಳಿಗಾಗಿ ಪ್ರಸ್ತುತಪಡಿಸಿದ ಗ್ರಂಥಗಳನ್ನು ಪುರಸ್ಕಾರಕ್ಕೆ ಪರಿಗಣಿಸಲಾಗುವದಿಲ್ಲ.

ಆಸಕ್ತ ಲೇಖಕರು 2018 ರ ಜನವರಿ 1 ರಿಂದ, ಡಿಸೆಂಬರ್ 31 ರೊಳಗೆ ಪ್ರಕಟವಾದ ತಮ್ಮ ಗ್ರಂಥಗಳ ತಲಾ ಮೂರು ಪ್ರತಿಗಳನ್ನು ಅಧ್ಯಕ್ಷರು, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ಜಗದ್ಗುರು ಶ್ರೀ ಶಿವರಾತ್ರೀಶ್ವರ ವೃತ್ತ, 1ನೇ ಮುಖ್ಯರಸ್ತೆ, ಜಯನಗರ 8ನೇ ವಿಭಾಗ, ಬೆಂಗಳೂರು, ಇಲ್ಲಿಗೆ ತಾ. 25 ರೊಳಗೆ ತಲಪುವಂತೆ ಕಳುಹಿಸಬಹುದು.