ಮಡಿಕೇರಿ, ಏ. 20: ಜಿಲ್ಲೆಯ ಏಕೈಕ ಶ್ರೀ ಬೈತೂರಪ್ಪ ಪೊವ್ವದಿ ದೇವಸ್ಥಾನವಿರುವ ಕೊಡಗರ ಹಳ್ಳಿಯಲ್ಲಿ ತಾ. 22ರಂದು (ನಾಳೆ) ವಾರ್ಷಿಕ ಹಬ್ಬ ನಡೆಯಲಿದೆ.

ಈಗಾಗಲೇ ಕಳೆದ 11 ದಿನಗಳಿಂದ ವಾರ್ಷಿಕ ಹಬ್ಬದ ಕಟ್ಟುಪಾಡುಗಳನ್ನು ಅನುಸರಿಸಲಾಗಿದ್ದು, ವಾರ್ಷಿಕ ಹಬ್ಬದ ದಿನದಂದು ತಕ್ಕರ ಮನೆಯಿಂದ ದೇವ ಭಂಡಾರವನ್ನು ದೇವಾಲಯಕ್ಕೆ ತಂದು ವಿಶೇಷ ಪೂಜಾ ಕೈಂಕರ್ಯಗಳನ್ನು ನಡೆಸಿ ಮಧ್ಯಾಹ್ನ ಅನ್ನ ಸಂತರ್ಪಣೆ ನಡೆಯಲಿದೆ. ಸಂಜೆ ಮರಕ್ಕೆ ಕಟ್ಟಿದ ತೆಂಗಿನಕಾಯಿಗೆ ಗುಂಡುಹೊಡೆಯುವ ಮೂಲಕ ಹಬ್ಬದ ಕಟ್ಟು ಹಾಗೂ ವಾರ್ಷಿಕ ಉತ್ಸವ ಸಂಪನ್ನಗೊಳ್ಳಲಿದೆ ಎಂದು ಪ್ರಕಟಣೆ ತಿಳಿಸಿದೆ.