ಸಿದ್ದಾಪುರ, ಏ. 20: ಪಾಳುಬಿದ್ದ ಬಾವಿಗೆ ಹಾರಿ ಕಾರ್ಮಿಕನೋರ್ವ ಆತ್ಮಹತ್ಯೆ ಮಾಡಿ ಕೊಂಡಿರುವ ಘಟನೆ ಮಾಲ್ದಾರೆ ಸಮೀಪದ ತಟ್ಟಳ್ಳಿ ಹಾಡಿಯಲ್ಲಿ ನಡೆದಿದೆ.
ತಟ್ಟಳ್ಳಿ ನಿವಾಸಿ ಜೇನುಕುರುಬರ ಲೊಕೇಶ್ (33) ಎಂಬಾತ ದಿನನಿತ್ಯ ಪಾನಮತ್ತನಾಗಿ ಮನೆಯಲ್ಲಿ ಕಲಹ ನಡೆಸುತ್ತಿದ್ದನು ಎನ್ನಲಾಗಿದೆ. ಜೀವನದಲ್ಲಿ ಜಿಗುಪ್ಸೆಗೊಂಡು ಮನೆಯ ಸಮೀಪದ ಗ್ರಾ.ಪಂ.ಗೆ ಸೇರಿದ ಬಾವಿಯ ಮೇಲಿಂದ ಹಗ್ಗವನ್ನು ಕುತ್ತಿಗೆಗೆ ಬಿಗಿದುಕೊಂಡು ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಬಗ್ಗೆ ಆತನ ಪತ್ನಿ ನೀಡಿದ ದೂರಿನನ್ವಯ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.