ಭಾಗಮಂಡಲ, ಏ. 20: ಇಲ್ಲಿನ ರಾಮ ಸೇವಾ ಟ್ರಸ್ಟ್ ವತಿಯಿಂದ ಭಾಗಮಂಡಲದ ರಾಮ ಮಂದಿರದಲ್ಲಿ ರಾಮೋತ್ಸವದ ಅಂಗವಾಗಿ ಎಂಟು ದಿನಗಳ ಕಾಲ ಕಾರ್ಯಕ್ರಮಗಳು ಜರುಗಿದವು.

ಭಜನೆ, ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ವೈಭವಪೂರ್ಣವಾಗಿ ರಾಮೋತ್ಸವವನ್ನು ಆಚರಿಸಲಾಯಿತು. ಸ್ಥಳೀಯ ಶಾಲಾ ಮಕ್ಕಳಿಂದ ವೈವಿಧ್ಯಮಯ ಕಾರ್ಯಕ್ರಮಗಳು ಹಾಗೂ ಕಲಾವಿದರಾದ ಮಿಲನ ಮತ್ತು ತಶ್ಮಿ ತಂಡದಿಂದ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಿದವು. ಕೊನೆಯ ದಿನ ರಾಮ ದೇವರ ವಿದ್ಯುತ್‍ಲಂಕೃತ ಮಂಟಪ ವಾದ್ಯಗೋಷ್ಠಿಯೊಂದಿಗೆ ಮುಖ್ಯ ಬೀದಿಯಲ್ಲಿ ಮೆರವಣಿಗೆ ನಡೆಯಿತು.

ಮರುದಿನ ಶಾಲಾ ಮಕ್ಕಳಿಂದ ಓಕುಳಿ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಟ್ರಸ್ಟ್ ಅಧ್ಯಕ್ಷ ಪಿ.ಆರ್. ಜಯನ್ ವಹಿಸಿದ್ದರು. ಗೌರವಾಧ್ಯಕ್ಷ ರವಿ ಹೆಬ್ಬಾರ್ ಮಾತನಾಡಿ, ಹಿಂದಿನ ವಯಸ್ಕರು ನಮಗೆ ಬಳುವಳಿಯಾಗಿ ನೀಡಿದ ರಾಮ ಮಂದಿರವನ್ನು ನಾವು ಮುಂದಿನ ಪೀಳಿಗೆಗೆ ಉಳಿಸಿಕೊಳ್ಳಬೇಕಾಗಿದೆ. ಈ ನಿಟ್ಟಿನಲ್ಲಿ ಜೀರ್ಣೋದ್ಧಾರ ಸಮಿತಿಯನ್ನು ರಚನೆ ಮಾಡಿದ್ದು ಮುಂದಿನ ದಿನಗಳಲ್ಲಿ ರಾಮ ಮಂದಿರ ಜೀರ್ಣೋದ್ಧಾರ ಕೈಗೊಳ್ಳಲಾಗುವದು. ಸ್ಥಳೀಯ ಜನರ ಸಹಕಾರ ಅಗತ್ಯ ಎಂದರು. ವೇದಿಕೆಯಲ್ಲಿ ಕೂಡಕಂಡಿ ಶಿವಪ್ರಸಾದ್, ನಿಡ್ಯಮಲೆ ಚಲನ್, ಶ್ಯಾಂಭಟ್, ರಾಜುರೈ, ನಿಡ್ಯಮಲೆ ಹರೀಶ್, ನಂದಕುಮಾರ್, ಕೆ.ಬಿ. ರದೀಶ್, ಶ್ರೀನಾಥ್, ಪದ್ಮಯ್ಯ, ಭಾಸ್ಕರ, ರಾಜು ಉಪಸ್ಥಿತರಿದ್ದರು.