ವೀರಾಜಪೇಟೆ, ಏ.20: ರಾಯಚೂರು ನಗರದ ಇಂಜಿನಿಯರಿಂಗ್ ವಿದ್ಯಾರ್ಥಿನಿ ಮಧು ಪತ್ತಾರ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯ ದೊರಕುವಂತೆ ಒತ್ತಾಯಿಸಿ ವೀರಾಜಪೇಟೆ ತಾಲೂಕು ಅಖಿಲ ಭಾರತ ವಿಧ್ಯಾರ್ಥಿ ಪರಿಷತ್ ಗಡಿಯಾರ ಕಂಬದ ಬಳಿ ಇಂದು ಸಂಜೆ ಮೇಣದ ಬತ್ತಿ ಹಿಡಿದು ಪ್ರತಿಭಟನೆ ನಡೆಸಿದರು.
ಎ.ಬಿ.ವಿ.ಪಿ. ತಾಲೂಕು ವಿದ್ಯಾರ್ಥಿನಿ ಪ್ರಮುಖ್ ವಿಕೀತ ವಿಜಯ್, ಎ.ಬಿ.ವಿ.ಪಿ ನಗರ ಕಾರ್ಯದರ್ಶಿ ಸುಜನ್ ಅಪ್ಪಯ್ಯ, ವಕೀಲರಾದ ಟಿ.ಪಿ ಕೃಷ್ಣ ಅವರುಗಳು ಮಾತನಾಡಿ ಕೃತ್ಯವನ್ನು ಖಂಡಿಸಿದರು.
ಪ್ರತಿಭಟನೆಯಲ್ಲಿ ಎ.ಬಿ.ವಿ.ಪಿ. ರಾಜ್ಯ ಕಾರ್ಯಕಾರಿಣಿ ಸದಸ್ಯೆ ನಿರ್ಮಿತಾ ಎನ್, ಸಿ.ಟಿ. ಸಿನೋಜ್, ತಾ. ಪ್ರಮುಖ್ ರಂಜಿತ್ ಎಸ್,ಕೆ. ಸತೀಶ್ ಸಂಘಟನೆಯ ಪ್ರಮುಖರಾದ ವಿವೇಕ್ ರೈ, ಪೊನ್ನಪ್ಪ ರೈ ಹಾಗೂ ನಾಗರಿಕರು ಪಾಲ್ಗೊಂಡಿದ್ದರು.