ಶನಿವಾರಸಂತೆ, ಏ. 20: ಸಮೀಪದ ಅಂಕನಹಳ್ಳಿ ಮನೆಹಳ್ಳಿ ತಪೋವನ ಕ್ಷೇತ್ರದಲ್ಲಿ 3 ದಿನಗಳ ಶ್ರೀ ಗುರುಸಿದ್ಧವೀರೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ಈಗಾಗಲೇ ಆರಂಭವಾಗಿದ್ದು, ತಾ. 21 ರಂದು (ಇಂದು) ಬೆಳಿಗ್ಗೆ 5 ಗಂಟೆಗೆ ಶ್ರೀ ಕ್ಷೇತ್ರ ವೀರಭದ್ರೇಶ್ವರ ಸ್ವಾಮಿಯವರ ಪ್ರೀತ್ಯರ್ಥ ದುಗ್ಗಳ ಹಾಗೂ ಅಗ್ನಿ ಕೆಂಡೋತ್ಸವ ಸೇವೆ 7 ಗಂಟೆಗೆ ಸ್ವಾಮಿಯವರ ಸಣ್ಣ ಚಂದ್ರಮಂಡಲೋತ್ಸವ, 9 ಗಂಟೆಗೆ ಸ್ವಾಮಿಯವರ ಅಡ್ಡಪಲ್ಲಕ್ಕಿ ಉತ್ಸವ, 11 ಗಂಟೆಗೆ ಶ್ರೀ ಪ್ರಸನ್ನ ತಪೋವನೇಶ್ವರಿ ಅಮ್ಮನವರ ಪ್ರೀತ್ಯರ್ಥ, ಮುತ್ತೈದೆ ಸೇವೆ, ಸುಮಂಗಲಿಯರಿಗೆ ಮಡಿಲು ತುಂಬುವ ಕಾರ್ಯಕ್ರಮ ನಂತರ ದಾಸೋಹ ಸೇವೆ ನಡೆಯಲಿದೆ.
ಮಧ್ಯಾಹ್ನ 1 ಗಂಟೆಗೆ ಶ್ರೀ ಸ್ವಾಮಿಯವರ ದೊಡ್ಡ ಚಂದ್ರಮಂಡಲೋತ್ಸವವಿದೆ. ಸಂಜೆ 5.30 ಗಂಟೆಗೆ ಶ್ರೀ ಸ್ವಾಮಿಯವರ ಪ್ರಾಕಾರ ಪಲ್ಲಕ್ಕಿ ಉತ್ಸವದೊಂದಿಗೆ ಶ್ರೀ ಸ್ವಾಮಿಯವರ ರಥೋತ್ಸವ ಬಿಜಯಂಗೈವುದು, 6.30 ಗಂಟೆಗೆ ಸ್ವಾಮಿಯವರ ಮಹಾ ರಥೋತ್ಸವ, 8 ಗಂಟೆಗೆ ಶ್ರೀ ವೃಷಬಲಿಂಗೇಶ್ವರ ಸ್ವಾಮಿಯವರ ಸನ್ನಿದಾನದಲ್ಲಿ ಮಹಾಮಂಗಳಾರತಿ ಮತ್ತು ಪ್ರಸಾದ ವಿನಿಯೋಗ ನಡೆಯಲಿದೆ.