ಮಡಿಕೇರಿ, ಏ. 20: ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿನ ಸರ್ಕಾರಿ ಆಸ್ಪತ್ರೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ‘ಡಿ’ ಗ್ರೂಪ್ ಮತ್ತು ಸ್ವಚ್ಛತಾ ಕಾರ್ಯಗಳಿಂದ ಹೊರತಾದ ಗುತ್ತಿಗೆ ಆಧಾರಿತ ನೌಕರರನ್ನು ತೆಗೆದು ಹಾಕುವ ಸರ್ಕಾರದ ನಿರ್ಧಾರದ ವಿರುದ್ಧ ತಾ. 29 ರಂದು ಸಾಂಕೇತಿಕ ಧರಣಿ ಸತ್ಯಾಗ್ರಹ ನಡೆಸಲಾಗುವ ದೆಂದು ಸಿಐಟಿಯು ಸಂಯೋಜಿತ ಕೊಡಗು ಜಿಲ್ಲಾ ಸರ್ಕಾರಿ ಆಸ್ಪತ್ರೆ ಸಿಬ್ಬಂದಿಗಳ ಸಂಘದ ಪದಾಧಿಕಾರಿ ಗಳು ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷÀ ಪಿ.ಆರ್. ಭರತ್, ಪ್ರಸಕ್ತ ಸಾಲಿನ ಮಾರ್ಚ್ 22 ರಂದು ಸರ್ಕಾರ ಆದೇಶವೊಂದನ್ನು ಹೊರಡಿಸಿ, ಸರ್ಕಾರಿ ಆಸ್ಪತ್ರೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಡಿ ಗ್ರೂಪ್ ಮತ್ತು ನಾನ್ ಕ್ಲೀನಿಂಗ್ ಸಿಬ್ಬಂದಿಗಳಲ್ಲಿ ಅಂದಾಜು ಅರ್ಧದಷ್ಟು ಮಂದಿ ಯನ್ನು ತೆಗೆಯುವದಾಗಿ ತಿಳಿಸಿತ್ತು. ಇದೀಗ ಈ ಆದೇಶವನ್ನು ಮೇ-ಜೂನ್ ತಿಂಗಳವರೆಗೆ ತಡೆಹಿಡಿಯ ಲಾಗಿದೆ. ಆದರೂ ಸರ್ಕಾರ ತನ್ನ ಆದೇಶವನ್ನು ಜಾರಿ ಮಾಡುವ ಆತಂಕವಿದೆ ಎಂದು ಅಭಿಪ್ರಾಯಪಟ್ಟರು.
ಗುತ್ತಿಗೆ ಆಧಾರದಲ್ಲಿ ನೌಕರರ ನೇಮಕದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದಿಂದ ಉಂಟಾಗುತ್ತಿರುವ ನಷ್ಟವಾಗುತ್ತಿದೆಯಾದ್ದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆಯೆಂದು ಸರ್ಕಾರ ಕಾರಣವನ್ನು ನೀಡುತ್ತದೆ. ಹೊರ ಜಿ¯್ಲÉಗಳಲ್ಲಿ ಇಂತಹ ಪ್ರಸಂಗಗಳು ನಡೆದಿರಬಹುದು. ಆದರೆ, ಪ್ರಾಮಾಣಿಕವಾಗಿ ಹಲವಾರು ವರ್ಷಗಳಿಂದ ಆಸ್ಪತ್ರೆಗಳಲ್ಲಿ ಗುತ್ತಿಗೆ ಮತ್ತು ಹೊರ ಗುತ್ತಿಗೆ ಆಧಾರದಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಡಿ ಗ್ರೂಪ್ ಮತ್ತು ನಾನ್ ಕ್ಲೀನಿಂಗ್ ಸಿಬ್ಬಂದಿಗಳಲ್ಲಿ ಅಂದಾಜು ಅರ್ಧದಷ್ಟು ಮಂದಿ ಯನ್ನು ತೆಗೆಯುವದಾಗಿ ತಿಳಿಸಿತ್ತು. ಇದೀಗ ಈ ಆದೇಶವನ್ನು ಮೇ-ಜೂನ್ ತಿಂಗಳವರೆಗೆ ತಡೆಹಿಡಿಯ ಲಾಗಿದೆ. ಆದರೂ ಸರ್ಕಾರ ತನ್ನ ಆದೇಶವನ್ನು ಜಾರಿ ಮಾಡುವ ಆತಂಕವಿದೆ ಎಂದು ಅಭಿಪ್ರಾಯಪಟ್ಟರು.
ಗುತ್ತಿಗೆ ಆಧಾರದಲ್ಲಿ ನೌಕರರ ನೇಮಕದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದಿಂದ ಉಂಟಾಗುತ್ತಿರುವ ನಷ್ಟವಾಗುತ್ತಿದೆಯಾದ್ದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆಯೆಂದು ಸರ್ಕಾರ ಕಾರಣವನ್ನು ನೀಡುತ್ತದೆ. ಹೊರ ಜಿ¯್ಲÉಗಳಲ್ಲಿ ಇಂತಹ ಪ್ರಸಂಗಗಳು ನಡೆದಿರಬಹುದು. ಆದರೆ, ಪ್ರಾಮಾಣಿಕವಾಗಿ ಹಲವಾರು ವರ್ಷಗಳಿಂದ ಆಸ್ಪತ್ರೆಗಳಲ್ಲಿ ಗುತ್ತಿಗೆ ಮತ್ತು ಹೊರ ಗುತ್ತಿಗೆ ಆಧಾರದಲ್ಲಿ 2 ಜೊತೆ ಸಮವಸ್ತ್ರಗಳನ್ನು ನೀಡಬೇಕು ಸೇರಿದಂತೆ ಸರ್ಕಾರ ಗುತ್ತಿಗೆ ನೌಕರರನ್ನು ಸೇವೆಯಿಂದ ತೆಗೆದು ಹಾಕಬಾರದೆಂದು ಆಗ್ರಹಿಸಿ ತಾ. 29 ರಂದು ಮಧ್ಯಾಹ್ನ 3 ಗಂಟೆಗೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುತ್ತದೆ ಎಂದು ಭರತ್ ತಿಳಿಸಿದರು.
ಸಂಘದ ಕಾರ್ಯದರ್ಶಿ ಹೆಚ್. ಜಾನಕಿ ಮಾತನಾಡಿ, ಡಿ ಗ್ರೂಪ್ ನೌಕರರಾಗಿ ಗುತ್ತಿಗೆ ಆಧಾರದಲ್ಲಿ ಕಳೆದ ಹತ್ತೊಂಬತ್ತು ವರ್ಷಗಳಿ ಗಿಂತಲೂ ಹೆಚ್ಚಿನ ಅವಧಿಯಿಂದ ಹಲವರು ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದೀಗ ನಮ್ಮನ್ನು ಕೆಲಸದಿಂದ ತೆಗೆಯುವ ಹುನ್ನಾರ ನಡೆಯುತ್ತಿದ್ದು, ಪ್ರಾಣ ಬೇಕಾದರು ಬಿಟ್ಟೇವು ಕೆಲಸ ಬಿಡುವದಿಲ್ಲವೆಂದು ಸ್ಪಷ್ಟಪಡಿಸಿದರು.
ಗೋಷ್ಠಿಯಲ್ಲಿ ಸಂಘದ ಖಜಾಂಚಿ ಲೋಕೇಶ್, ಸದಸ್ಯರುಗಳಾದ ಬಿ.ಎಸ್. ಮುಂಜುಳಾ ಹಾಗೂ ಅರುಣ್ ಕುಮಾರ್ ಉಪಸ್ಥಿತರಿದ್ದರು.