ಗೋಣಿಕೊಪ್ಪ ವರದಿ, ಏ. 20: ಇಲ್ಲಿನ ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಕೊಡಗು ಹಿಂದೂ ಮಲಯಾಳಿ ಸಮಾಜ ಆಯೋಜಿಸಿ ರುವ ಕೊಡಗು ಹಿಂದು ಫುಟ್ಬಾಲ್ ಟೂರ್ನಿಯಲ್ಲಿ ಮರಗೋಡು ವೈಷ್ಣವಿ (ಎ) ಹಾಗೂ ಮಾತೃಭೂಮಿ ತಂಡ ಸೆಮಿ ಫೈನಲ್ ಪ್ರವೇಶ ಪಡೆದಿವೆ.

ಮರಗೋಡು ವೈಷ್ಣವಿ (ಎ) ತಂಡವು ಕ್ವಾರ್ಟರ್ ಫೈನಲ್‍ನಲ್ಲಿ ಅಮ್ಮತ್ತಿ ನೆಹರು ತಂಡವನ್ನು 1-0 ಗೋಲುಗಳಿಂದ ಮಣಿಸಿ ಸೆಮಿ ಫೈನಲ್ ಪ್ರವೇಶ ಪಡೆಯಿತು. ಮತ್ತೊಂದು ಕ್ವಾರ್ಟರ್ ಫೈನಲ್‍ನಲ್ಲಿ ಮಾತೃಭೂಮಿ ತಂಡವು ಕಾವೇರಿ ಫ್ರೆಂಡ್ಸ್ ತಂಡದ ವಿರುದ್ದ 1-0 ಗೋಲುಗಳಿಂದ ಜಯಿಸಿತು.

ಇದಕ್ಕೂ ಮುನ್ನ ನಡೆದ ಪಂದ್ಯಗಳಲ್ಲಿ ಮರಗೋಡು ವೈಷ್ಣವಿ ತಂಡವು ಗೋಣಿಕೊಪ್ಪ ಸನ್‍ರೈಸರ್ಸ್ ತಂಡವನ್ನು 1-0 ಗೋಲುಗಳಿಂದ ಸೋಲಿಸಿತು. ಶ್ರೀಮಂಗಲ ತಂಡ ಗೈರಾದ ಕಾರಣ ಬಾಳೆಲೆ ಫ್ರೆಂಡ್ಸ್ ತಂಡವು ಜಯ ಪಡೆಯಿತು. ಕಣ್ಣನ್ ಟಯರ್ಸ್ (ಸಿ) ತಂಡವು ಕಾವೇರಮ್ಮ ಬಾಯ್ಸ್ ವಿರುದ್ದ 2-0 ಗೋಲುಗಳ ಜಯ ಸಾಧಿಸಿತು. ಪಾಲಿಬೆಟ್ಟ ನೆಹರು ತಂಡ ಗೈರು ಹಾಜರಾದ ಕಾರಣ ಕೈಕೇರಿ ಇವ್ನಿಂಗ್ ಸ್ಟ್ರೈಕರ್ ತಂಡ ಗೆಲುವು ದಾಖಲಿಸಿತು. ಬಾಳೆಲೆ ಫ್ರೆಂಡ್ಸ್ ತಂಡವು ಕಣ್ಣನ್ ಟಯರ್ಸ್ ಬಿ ತಂಡವನ್ನು 2-0 ಗೋಲುಗಳಿಂದ ಮಣಿಸಿತು.

ಪಾಲಿಬೆಟ್ಟ ರೋಜರ್ ತಂಡವು ಚಾಮುಂಡಿ ಯುವಕ ಸಂಘದ ಎದುರು 3-0 ಗೋಲುಗಳ ಮೂಲಕ ಜಯ ಸಾಧನೆ ಮಾಡಿತು. ಹಾಲುಗುಂದ ತಂಡ ಗೈರಾದ ಕಾರಣ ಜೋಡುಬೀಟಿ ಶಾಜಿ ತಂಡ ಮುಂದಿನ ಸುತ್ತಿಗೆ ಪ್ರವೇಶ ಪಡೆಯಿತು.

ಇಂದು ಸಮಾರೋಪ

ತಾ. 21 ರಂದು (ಇಂದು) ಮಧ್ಯಾಹ್ನ 3 ಗಂಟೆಗೆ ನಡೆಯುವ ಸಮಾರೋಪದಲ್ಲಿ ಹಿರಿಯ ಅಂತರ್ರಾಷ್ಟ್ರೀಯ ಓಟಗಾರ ಪೆಮ್ಮಂಡ ಎಂ. ಅಪ್ಪಯ್ಯ, ಶೌರ್ಯಚಕ್ರ ಪ್ರಶಸ್ತಿ ವಿಜೇತ ಯೋಧ ಎಚ್. ಎನ್. ಮಹೇಶ್, ಮಾಧ್ಯಮ ಕ್ಷೇತ್ರದಲ್ಲಿ ಜಿಲ್ಲಾ ಪ್ರಶಸ್ತಿ ವಿಜೇತರುಗಳಾದ ಸಣ್ಣುವಂಡ ಕಿಶೋರ್ ನಾಚಪ್ಪ, ಎಚ್. ಕೆ. ಜಗದೀಶ್, ಯುವ ಕ್ರೀಡಾ ಸಾಧಕರು ಗಳಾದ ಟಿ. ಬಿ. ಅಶ್ವಿನಿ ಹಾಗೂ ಕೆ. ಎಸ್. ಐಶ್ವರ್ಯ ಅವರುಗಳನ್ನು ಸನ್ಮಾನಿಸಲಾಗುವದು. ಮಧ್ಯಾಹ್ನ 3 ಕ್ಕೆ ಫೈನಲ್ ಪಂದ್ಯ ನಡೆಯಲಿದೆ.