ಮಡಿಕೇರಿ, ಏ. 22: ಕೊಡಗು - ಮೈಸೂರು ಲೋಕಸಭಾ ಕ್ಷೇತ್ರದಲ್ಲಿ ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಂತೆ ಒಟ್ಟು ಹದಿನೆಂಟು ಲಕ್ಷದ ತೊಂಬತ್ತನಾಲ್ಕು ಸಾವಿರದ ಮುನ್ನೂರ ಎಪ್ಪತ್ತೆರಡು ಮಂದಿ ಮತದಾರರಿದ್ದಾರೆ. ಈ ಪೈಕಿ ಒಂಬತ್ತು ಲಕ್ಷದ ನಲವತ್ತೊಂಬತ್ತು ಸಾವಿರದ ಏಳುನೂರ ಎರಡು ಮಂದಿ ಮಹಿಳೆಯರು ಹಾಗೂ ಒಂಬತ್ತು ಲಕ್ಷದ ನಲವತ್ತನಾಲ್ಕು ಸಾವಿರದ ಐದುನೂರ ಎಪ್ಪತ್ತೇಳು ಮಂದಿ ಪುರುಷರಿದ್ದಾರೆ.(ಮೊದಲ ಪುಟದಿಂದ) ಅಲ್ಲದೆ ಇಲ್ಲಿ ಐದು ಸಾವಿರದ ಒಂದುನೂರ ಇಪ್ಪತ್ತೈದು ಮಂದಿ ಮಹಿಳಾ ಮತದಾರರ ಸಂಖ್ಯೆ ಅಧಿಕವಿದೆ. ತಾ. 18 ರಂದು ನಡೆದ ಚುನಾವಣೆಯಲ್ಲಿ ಗಮನಿಸಿದರೆ, ಪುರುಷರು ಮಹಿಳೆಯರಿಗಿಂತ ಕಡಿಮೆ ಸಂಖ್ಯೆಯಲ್ಲಿ ಮತದಾನದಲ್ಲಿ ಭಾಗವಹಿಸಿರುವದು ಕಂಡು ಬಂದಿದೆ.

ಮೈಸೂರು - ಕೊಡಗು ಲೋಕಸಭಾ ಕ್ಷೇತ್ರದ ಎಂಟು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು ಆರು ಲಕ್ಷದ ಅರವತ್ತನಾಲ್ಕು ಸಾವಿರದ ಏಳುನೂರ ಹನ್ನೆರಡು ಮಂದಿ ಪುರುಷರು ಮತದಾನ ಮಾಡಿದ್ದಾರೆ. ಬದಲಾಗಿ ಆರು ಲಕ್ಷದ ನಲವತ್ತೇಳು ಸಾವಿರದ ಇನ್ನೂರ ಮೂರು ಮಂದಿ ಮಹಿಳೆ ಯರು ಮಾತ್ರ ಮತದಾನದಲ್ಲಿ ಭಾಗವಹಿಸಿದ್ದಾರೆ.

17,509 ಕಡಿಮೆ : ಈ ಪೈಕಿ ಕೊಡಗು - ಮೈಸೂರು ಲೋಕಸಭಾ ಕ್ಷೇತ್ರದಲ್ಲಿ ಪುರುಷರಿಗಿಂತ ಅಧಿಕ ಸಂಖ್ಯೆಯ ಮಹಿಳಾ ಮತದಾರರಿದ್ದರೂ ಬೇರೆ ಬೇರೆ ಕಾರಣಗಳ ನಡುವೆ, 17,509 ಮಂದಿಯಷ್ಟು ಪುರುಷರಿಗಿಂತ ಕಡಿಮೆ ಮತದಾನವಾಗಿದೆ.

ಕ್ಷೇತ್ರವಾರು ಹಿನ್ನೆಡೆ : ಇನ್ನೊಂದೆಡೆ ವೀರಾಜಪೇಟೆ ವಿಧಾನಸಭಾ ಕ್ಷೇತ್ರ, ಪಿರಿಯಾಪಟ್ಟಣ, ಹುಣಸೂರು, ಚಾಮುಂಡೇಶ್ವರಿ, ಕೃಷ್ಣರಾಜ, ಚಾಮರಾಜ, ನರಸಿಂಹರಾಜ ಈ ಎಲ್ಲ ಕ್ಷೇತ್ರಗಳಲ್ಲಿ ಮಹಿಳಾ ಮತದಾರರಿಗಿಂತ, ಪುರುಷ ಮತದಾರರು ಅಧಿಕ ಸಂಖ್ಯೆಯಲ್ಲಿ ತಮ್ಮ ಹಕ್ಕು ಚಲಾಯಿಸಿರುವದು ಕಂಡು ಬಂದಿದೆ. ಹೀಗಾಗಿ ಒಟ್ಟಾರೆ ಕ್ಷೇತ್ರಗಳನ್ನು ಗಮನಿಸಿದಾಗ ಮಡಿಕೇರಿ ವಿಧಾನಸಭಾ ಕ್ಷೇತ್ರದಲ್ಲಿ ಮಹಿಳೆಯರು ಗಣನೀಯ ಮತದಾನದೊಂದಿಗೆ ಮಿಕ್ಕೆಲ್ಲೆಡೆಗಳಲ್ಲಿ ಹಿಂದೆ ಉಳಿದಿರುವದು ಗೋಚರಿಸಿದೆ.