ಇಂದಿನಿಂದ ಪೂಜೋತ್ಸವ

ಸೋಮವಾರಪೇಟೆ, ಏ. 22: ಸಮೀಪದ ಗಾಂಧಿನಗರ ಗ್ರಾಮದಲ್ಲಿರುವ ಶ್ರೀ ದೊಡ್ಡಮಾರಿಯಮ್ಮ ದೇವರ ವಾರ್ಷಿಕ ಮಹಾ ಪೂಜೋತ್ಸವ ತಾ. 23 ಮತ್ತು 24 ರಂದು ನಡೆಯಲಿದೆ ಎಂದು ದೇವಾಲಯ ಸಮಿತಿ ಪ್ರಕಟಣೆ ತಿಳಿಸಿದೆ. ತಾ. 23ರಂದು ಸಂಜೆ 6 ಗಂಟೆಗೆ ದೇವರ ಮೆರವಣಿಗೆ, ತಾ. 24ರಂದು ಪೂರ್ವಾಹ್ನ 11 ಗಂಟೆಗೆ ಜ್ಯೋತಿ ಪೂಜೆ, ವಾರ್ಷಿಕ ಪೂಜೋತ್ಸವ ಮಧ್ಯಾಹ್ನ ಮಹಾಮಂಗಳಾರತಿ, ನಂತರ ಅನ್ನದಾನ ಕಾರ್ಯಕ್ರಮಗಳು ಜರುಗಲಿವೆ. ಇಂದಿನಿಂದ ಪೂಜೋತ್ಸವ

ಸುಂಟಿಕೊಪ್ಪ, ಏ. 22: ಗುಡ್ಡಪ್ಪ ರೈ ಬಡಾವಣೆಯಲ್ಲಿ ಹಲವಾರು ವರ್ಷಗಳಿಂದ ನೆಲೆಗೊಂಡಿರುವ ಹುಲಿ ಮಸಣಿಕಮ್ಮ ದೇವಾಲಯದ ವಾರ್ಷಿಕ ಪೂಜಾ ಮಹೋತ್ಸವವು ತಾ. 23 ರಂದು (ಇಂದು) ನಡೆಯಲಿದೆ. ಬೆಳಿಗ್ಗೆ 7.30 ರಿಂದ ವಿವಿಧ ಪೂಜಾ ಕೈಂಕಾರ್ಯಗಳು ನಡೆಯಲಿದೆ. 9.30 ರಿಂದ 11 ಗಂಟೆಯವರೆಗೆ ದೇವಿಗೆ ಅರ್ಪಣೆ ನಡೆಯಲಿದ್ದು, ಮದ್ಯಾಹ್ನ 1.05ಕ್ಕೆ ಮಹಾಮಂಗಳಾರತಿ, ನಂತರ 3 ಗಂಟೆಯವರೆಗೆ ಅನ್ನಸಂತರ್ಪಣೆ ನಡೆಯಲಿದೆ ಎಂದು ದೇವಾಲಯದ ಪದಾಧಿಕಾರಿಗಳು ತಿಳಿಸಿದ್ದಾರೆ.

ಅನ್ನಪೂರ್ಣೇಶ್ವರಿ ದೇಗುಲದಲ್ಲಿ ಪೂಜೆ

ಮಡಿಕೇರಿ ಏ. 22 : ಮೂರ್ನಾಡು ಗಾಂಧಿನಗರದ ಶ್ರೀ ಅನ್ನಪೂರ್ಣೆಶ್ವರಿ ದೇವಾಲಯದ ವತಿಯಿಂದ ಹನುಮ ಜಯಂತಿ ಪ್ರಯುಕ್ತ ವಿಶೇಷ ಪೂಜಾ ಕಾರ್ಯ ಕ್ರಮವನ್ನುಹಮ್ಮಿಕೊಳ್ಳಲಾಯಿತು.

ಹನುಮ ಮೂರ್ತಿಗೆ ಅಭಿಷೇಕ, ಸತ್ಯನಾರಾಯಣ ಪೂಜೆ, ಅನ್ನಪೂರ್ಣೆಶ್ವರಿ ಮಾತೆಗೆ ವಿಶೇಷ ಪೂಜೆ ನಡೆಸ ಲಾಯಿತು. ಪೂಜಾ ಕಾರ್ಯಕ್ರಮವನ್ನು ಅರ್ಚಕರಾದ ಮಹಬಲೇಶ್ವರ ಭಟ್ ಅವರ ನೇತೃತ್ವದಲ್ಲಿ ನಡೆಸಲಾಯಿತು.

ಈ ಸಂದರ್ಭ ದೇವಾಲಯದ ಆಡಳಿತ ಮಂಡಳಿಯ ಜಯಂತಿ ಶುಭ, ಗ್ರೇಸಿ ಯಶೋಧ, ಅನ್ನಪೂರ್ಣೆಶ್ವರಿ ನೃತ್ಯ ಶಾಲೆಯ ಶಿಕ್ಷಕಿ ಕಾವ್ಯಶ್ರೀ ಹಾಗೂ ಯುವ ಒಕ್ಕೂಟದ ಜಿಲ್ಲಾಧ್ಯಕ್ಷ ಪಿ.ಪಿ. ಸುಕುಮಾರ್ ಸೇರಿದಂತೆ ಭಕ್ತಾದಿಗಳು ಹಾಜರಿದ್ದರು.

ವನದುರ್ಗಿ ದೇವರ ಪೂಜೋತ್ಸವ

ಸೋಮವಾರಪೇಟೆ, ಏ. 22: ಪಟ್ಟಣದ ರೇಂಜರ್ಸ್ ಬ್ಲಾಕ್‍ನಲ್ಲಿರುವ ವನದುರ್ಗಾ ದೇವಿಯ ಬನದಲ್ಲಿನ ದುರ್ಗಾ ಸನ್ನಿಧಿಯಲ್ಲಿ ವನದುರ್ಗಿ, ಚೌಡಿಯಮ್ಮ ಹಾಗೂ ಗುಳಿಗಪ್ಪ ದೇವರ ವಾರ್ಷಿಕ ಪೂಜೆ ನಡೆಯಿತು.

ನೂರಾರು ವರ್ಷಗಳ ಇತಿಹಾಸವಿರುವ ವನದುರ್ಗಾ ದೇವಿಗೆ ಬೆಳಗಿನಿಂದಲೇ ವಿಶೇಷ ಪೂಜಾ ಕೈಂಕರ್ಯಗಳು ನಡೆದವು. ನಂತರ ಚೌಡಿಯಮ್ಮ ಹಾಗೂ ಗುಳಿಗಪ್ಪ ದೇವರುಗಳಿಗೆ ಪೂಜೆ ನೆರವೇರಿಸಲಾಯಿತು. ಪೂಜಾ ಕಾರ್ಯಗಳು ಅರ್ಚಕ ಸುರೇಶ್ ಅವರ ಪೌರೋಹಿತ್ಯದಲ್ಲಿ ನಡೆಯಿತು. ಶಾಸಕ ಅಪ್ಪಚ್ಚು ರಂಜನ್, ಪಟ್ಟಣ ಪಂಚಾಯಿತಿ ಸದಸ್ಯರುಗಳಾದ ಬಿ. ಸಂಜೀವ, ಬಿ.ಆರ್. ಮಹೇಶ್, ಮಾಜಿ ಅಧ್ಯಕ್ಷೆ ವಿಜಯಲಕ್ಷ್ಮಿ ಸುರೇಶ್, ಮಾಜಿ ಸದಸ್ಯೆ ಸುಷ್ಮಾ, ಆರಕ್ಷಕ ಉಪನಿರೀಕ್ಷಕ ಶಿವಶಂಕರ್, ಪ್ರೊಬೇಷನರಿ ಉಪನಿರೀಕ್ಷಕ ಮೋಹನ್‍ರಾಜ್ ಸೇರಿದಂತೆ ನೂರಾರು ಮಂದಿ ಉಪಸ್ಥಿತರಿದ್ದರು.

ಮಹಾಮಂಗಳಾರತಿ ನಂತರ ಭಕ್ತರಿಗೆ ಅನ್ನಸಂತರ್ಪಣೆ ನಡೆಯಿತು. ಪೂಜಾ ಕಾರ್ಯಗಳ ನೇತೃತ್ವವನ್ನು ಪೂಜೋತ್ಸವ ಸಮಿತಿ ಅಧ್ಯಕ್ಷ ಶಿವಪ್ರಸಾದ್ ಹಾಗೂ ಪ್ರಮುಖರುಗಳಾದ ಸುಧಾಕರ್ ಶೆಟ್ಟಿ, ಎಸ್.ಎನ್. ಅಜಯ್, ಶರತ್‍ಚಂದ್ರ, ಎಸ್.ಎನ್. ಅರುಣ್, ಪಿ.ಎಲ್. ಸತೀಶ್ ಸೇರಿದಂತೆ ಇತರರು ವಹಿಸಿದ್ದರು.