*ಗೋಣಿಕೊಪ್ಪಲು, ಏ. 22 : ಅಂಗನವಾಡಿ ಸಹಾಯಕಿ ಅಂಗನವಾಡಿ ಮಕ್ಕಳ ಆಹಾರ ಪದಾರ್ಥಗಳನ್ನು ತನ್ನ ಮನೆಗೆ ಕೊಂಡೊಯ್ಯುತ್ತಿರುವ ದೃಶ್ಯವನ್ನು ಸ್ಥಳೀಯರು ಮೊಬೈಲ್‍ನಲ್ಲಿ ಸೆರೆ ಹಿಡಿದಿರುವದು ಇದೀಗ ವೈರಲಾಗಿದೆ.

ಪೊನ್ನಂಪೇಟೆ ಗ್ರಾ.ಪಂ ವ್ಯಾಪ್ತಿಯ ಶಿವ ಕಾಲೋನಿ ಅಂಗನವಾಡಿ ಸಹಾಯಕಿ ಗೌರಮ್ಮ ಈ ಕೃತ್ಯ ಎಸಗಿರುವ ಬಗ್ಗೆ ಸಾರ್ವಜನಿಕರು ಸಾಬಿತುಪಡಿಸಿದ್ದಾರೆ. ಈ ವಿಚಾರವನ್ನು ಮೊಬೈಲ್‍ನಲ್ಲಿ ಸೆರೆ ಹಿಡಿಯುವ ಮೂಲಕ ಪೊನ್ನಂಪೇಟೆ ತಾಲೂಕು ಜೆಡಿಎಸ್ ಅಧ್ಯಕ್ಷೆ ಕುಸುಮ ಚಂದ್ರಶೇಖರ್ ಬಹಿರಂಗಪಡಿಸಿದ್ದಾರೆ. ಮೇಲಿನ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. -ಎನ್.ಎನ್. ದಿನೇಶ್