ಕೂಡಿಗೆ, ಏ. 22 : ಕೂಡಿಗೆಯ ಡೈರಿ ಮುಂಭಾಗದಲ್ಲಿ ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತುಸೇವೆ ಕುಶಾಲನಗರದ ವತಿಯಿಂದ ಸೇವಾ ಸಪ್ತಾಹ ಆಚರಿಸಿ, ಪ್ರಾತ್ಯಾಕ್ಷತೆಯನ್ನು ಮಾಡಲಾಯಿತು.

ಕುಶಾಲನಗರ ಅಗ್ನಿಶಾಮಕ ಠಾಣಾಧಿಕಾರಿ ರಾಜಗೋಪಾಲ್ ಬೆಂಕಿ ತಗುಲಿದಾಗ ಅನಾಹುತ ಮತ್ತು ನಿರ್ವಹಣೆಯ ಬಗ್ಗೆ, ಮುನ್ನೆಚ್ಚರಿಕಾ ಕ್ರಮಗಳು, ಗುಡುಗು-ಸಿಡಿಲು ಬಂದಾಗ ವಿದ್ಯುತ್‍ನಿಂದ ಉಂಟಾಗುವ ಅನಾಹುತ ಆಗದಂತೆ ಮುನ್ನೆಚ್ಚರಿಕೆ ಮಾಹಿತಿ ನೀಡಿದರು. ಅಗ್ನಿಶಾಮಕ ಸೇವಾ ಸಪ್ತಾಹ ವನ್ನು ಏಳು ದಿನಗಳ ಕಾಲ ಕೈಗಾರಿಕಾ ಘಟಕಗಳ ಕೇಂದ್ರಗಳಲ್ಲಿ, ಸಾರ್ವಜನಿಕವಾಗಿ ನಡೆಸಲಾಯಿತು. ಕೂಡಿಗೆ ಡೈರಿಯ ಪ್ರಧಾನ ವ್ಯವಸ್ಥಾಪಕರಾದ ನಂದೀಶ್, ಅಗ್ನಿಶಾಮಕ ಸಿಬ್ಬಂದಿಗಳಾದ ಚಂದ್ರಹಾಸ, ಹರೀಶ್, ಮಧು, ರಾಕೇಶ್, ಸೇರಿದಂತೆ ಡೈರಿಯ ಸಿಬ್ಬಂದಿ ವರ್ಗ ಹಾಗೂ ಆಡಳಿತ ವರ್ಗ ಇದ್ದರು.