ನಾಪೋಕ್ಲು, ಏ. 22: ಕಕ್ಕಬ್ಬೆಯ ದಿ ಹೈಲ್ಯಾಂಡರ್ಸ್ ಫ್ಯಾಮಿಲಿ ಕ್ಲಬ್ (ಎಚ್‍ಎಫ್‍ಸಿ) ಆಶ್ರಯದಲ್ಲಿ ಜನರಲ್ ಕೆ.ಎಸ್. ತಿಮ್ಮಯ್ಯ ತಾಲೂಕು ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿರುವ ಹೈಲ್ಯಾಂಡರ್ಸ್ ಆಹ್ವಾನಿತ ಕಪ್ ಹಾಗೂ ವಾರಿಯರ್ಸ್ ಚಾಂಪಿಯನ್ ಕಪ್‍ಗೆ ತಾ.23 (ಇಂದು) ರಂದು ಚಾಲನೆ ದೊರೆಯಲಿದೆ.
ಪ್ರಕೃತಿ ವಿಕೋಪದಿಂದ ಹಾನಿಗೀಡಾದ ಗ್ರಾಮ ವ್ಯಾಪ್ತಿ ಯಲ್ಲಿರುವ 14 ಕೊಡವ ಕುಟುಂಬ ತಂಡಗಳ ನಡುವೆ ಹೈಲ್ಯಾಂಡರ್ಸ್ ಆಹ್ವಾನಿತ ಕಪ್ ಹಾಕಿ ಪಂದ್ಯಾವಳಿ ಆಯೋಜಿಸಲಾಗಿದೆ. ಈ ಪಂದ್ಯಾವಳಿ ಮೂಲಕ ಸಂಗ್ರಹವಾಗುವ ಹಣವನ್ನು ಸಂತ್ರಸ್ತರಿಗೆ ನೆರವಿನ ರೂಪದಲ್ಲಿ ನೀಡಲು ಉದ್ದೇಶಿಸಲಾಗಿದೆ. ಸಂತ್ರಸ್ತರಿಗೆ ನೆರವು ನೀಡಲು ಬಯಸುವವರು ಕ್ಲಬ್ ಮೂಲಕ ದೇಣಿಗೆ ನೀಡಬಹುದಾಗಿದೆ. ತಾ.28 ರಂದು ನಡೆಯುವ ಸಮಾರೋಪ ಸಮಾರಂಭದಲ್ಲಿ ಆರ್ಥಿಕ ನೆರವು ಒದಗಿಸಲಾಗುವದೆಂದು ಕ್ಲಬ್ ಅಧ್ಯಕ್ಷ ಅಪ್ಪಾರಂಡ ಸಾಗರ್ ಮಾಹಿತಿ ನೀಡಿದ್ದಾರೆ.
ಗೋಣಿಕೊಪ್ಪಲಿನ ಕಾಲ್ಸ್, ಪೊನ್ನಂಪೇಟೆಯ ಸಾಯಿಶಂಕರ್, ಮೈಸೂರಿನ ವಿದ್ಯಾಶ್ರಮ ವಿದ್ಯಾಸಂಸ್ಥೆಗಳು ಪ್ರತಿಭಾನ್ವಿತ ಹಾಕಿ ಆಟಗಾರರಿಗೆ ತಮ್ಮ ಸಂಸ್ಥೆಯಲ್ಲಿ ಉಚಿತವಾಗಿ ಶಿಕ್ಷಣ ನೀಡಲು ಮುಂದೆ ಬಂದಿವೆ. ಕೂರ್ಗ್ ಹಾಕಿ ಅಕಾಡೆಮಿ ಉಪಾಧ್ಯಕ್ಷ ಕಲಿಯಂಡ ಸಿ. ನಾಣಯ್ಯ, ಹಿರಿಯ ಆಟಗಾರ ಬಡಕಡ ದೀನ ಪೂವಯ್ಯ,
(ಮೊದಲ ಪುಟದಿಂದ) ವೀಕ್ಷಕ ವಿವರಣೆಗಾರ ಚೆಪ್ಪುಡಿರ ಕಾರ್ಯಪ್ಪ, ರಾಷ್ಟ್ರೀಯ ಹಾಕಿ ತೀರ್ಪುಗಾರ ಅಂಜಪರವಂಡ ಶರಣ್ ಕಾರ್ಯಪ್ಪ ಹಾಗೂ ಹಾಕಿ ಕೊಡಗು ಮಾರ್ಗದರ್ಶನದಲ್ಲಿ ಹಾಕಿ ಪಂದ್ಯಾವಳಿ ನಡೆಯಲಿದೆ.
ನಾಗಂಡ, ಮಂಡೀರ, ಚನ್ನಪಂಡ, ಕಾಳಚಂಡ, ತಂಬುಕುತ್ತೀರ, ಮಲ್ಲಂಜೀರ, ಓಡಿಯಂಡ, ಪಾಸೂರ, ಮುದ್ದಂಡ, ಮುಕ್ಕಾಟೀರ, ಚೆಟ್ಟೀರ, ಮಂದೆಯಂಡ, ಮೊರ್ಕಂಡ, ಶಾಂತೆಯಂಡ ಕುಟುಂಬಗಳು ಪಾಲ್ಗೊಳ್ಳಲಿವೆ.
ವಾರಿಯರ್ಸ್ ಚಾಂಪಿಯನ್ ಕಪ್
ವಾರಿಯರ್ಸ್ ಚಾಂಪಿಯನ್ ಕಪ್ ಹಾಕಿ ಲೀಗ್‍ನಲ್ಲಿ ಆರು ಕೊಡವ ಕುಟುಂಬ ತಂಡಗಳು ಪಾಲ್ಗೊಳ್ಳಲಿವೆ. ಕಲಿಯಂಡ, ಮಂಡೇಪಂಡ, ಕಾಂಡಂಡ, ಅಂಜಪರವಂಡ, ಚೆಪ್ಪುಡೀರ, ಅರೆಯಡ ಕುಟುಂಬ ತಂಡಗಳ ನಡುವೆ ಸೆಣಸಾಟ ನಡೆಯಲಿವೆ.
ಸಭಾ ಕಾರ್ಯಕ್ರಮ
ತಾ. 23 ರಂದು 10 ಗಂಟೆಗೆ ದಿ ಹೈಲ್ಯಾಂಡರ್ಸ್ ಫ್ಯಾಮಿಲ್ ಕ್ಲಬ್ ಅಧ್ಯಕ್ಷ ಅಪ್ಪಾರಂಡ ಸಾಗರ್ ಅಧ್ಯಕ್ಷತೆಯಲ್ಲಿ ಹಾಕಿ ಪಂದ್ಯಾವಳಿ ಉದ್ಘಾಟನಾ ಸಮಾರಂಭ ನಡೆಯಲಿದೆ. ಕೊಡವ ಹಾಕಿ ಅಕಾಡೆಮಿ ಉಪಾಧ್ಯಕ್ಷ ಕಲಿಯಂಡ ಸಿ. ನಾಣಯ್ಯ, ಬೆಳೆಗಾರ ಕುಲ್ಲೇಟಿರ ಶಂಭು, ಅಪ್ಪಾರಂಡ ಅಪ್ಪಯ್ಯ, ಡಾ.ನಡಿಕೇರಿಯಂಡ ತೇಜ್ ಪೂವಯ್ಯ, ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ನಂದಿನೆರವಂಡ ನಾಚಪ್ಪ, ಕೊಡಗು ಪ್ರೆಸ್ ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ, ಜಿಪಂ ಮಾಜಿ ಉಪಾಧ್ಯಕ್ಷೆ ಅಲ್ಲಾರಂಡ ಬೀನಾ ಬೊಳ್ಳಮ್ಮ, ಕರ್ನಾಟಕ ರೈತ ಸಂಘ ಕೊಡಗು ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ, ನಾಪೋಕ್ಲು ಗ್ರಾಮ ಪಂಚಾಯಿತಿ ಸದಸ್ಯ ಮಾಚೆಟ್ಟೀರ ಕುಶಾಲಪ್ಪ, ಉದ್ಯಮಿ ಅಡ್ಡೇಂಗಡ ತೇಜ್ ನಂಜಪ್ಪ, ತಲಕಾವೇರಿ- ಭಗಂಡೇಶ್ವರ ದೇವಾಲಯ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಿದ್ದಾಟಂಡ ಎಸ್. ತಮ್ಮಯ್ಯ ಪಾಲ್ಗೊಳ್ಳಲಿದ್ದಾರೆ.