ಸೋಮವಾರಪೇಟೆ. ಏ. 22 : ಕೊಫುಕಾನ್ ಶಿಟೋ ರಿಯೋ ಕರಾಟೆ ಶಾಲೆಯ ವತಿಯಿಂದ ನಡೆದ ಕರಾಟೆ, ಯೋಗ ಶಿಬಿರದಲ್ಲಿ 16 ಮಂದಿ ಕರಾಟೆ ಪಟುಗಳು ಬ್ಲ್ಯಾಕ್ ಬೆಲ್ಟ್ ಪಡೆದಿದ್ದಾರೆ.
ಶಿಬಿರದಲ್ಲಿ ಭಾಗವಹಿಸಿದ್ದ ಜಗದೀಶ್,ಪ್ರಿಯಾಂಕ, ರಿಚರ್ಡ್, ಮೋದಕ್, ಮಂಜುನಾಥ್, ಸಚಿನ್, ತ್ರಿಶ್‍ಕುಮಾರ್, ಸಿನದ್, ಅಫ್ಜಲ್, ಗುರುಪ್ರಸಾದ್, ಲಿಖಿತ್, ಧ್ಯಾನ್, ಅಂಕಿತ್, ಹೃಷಿಕೇಶ್, ಅಕ್ಷಯ್, ಭುವಿನ್ ಅವರುಗಳು ಬ್ಲ್ಯಾಕ್ ಬೆಲ್ಟ್‍ಗೆ ಭಾಜನರಾಗಿದ್ದಾರೆ. ಕುಮಾರಸ್ವಾಮಿ, ಮೊಹಮ್ಮದ್ ಇಕ್ಬಾಲ್, ಅನಿಲ್ ಕುಮಾರ್ ಅವರುಗಳು ತರಬೇತಿ ನೀಡಿದ್ದರು.