ಸಿದ್ದಾಪುg, ಏ.22: ಕಣ್ಣಂಗಾಲ ಗ್ರಾಮದ ದೇವರಮೊಟ್ಟೆ ಪೈಸಾರಿಯಲ್ಲಿ ಕಾಡಾನೆ ಹಿಂಡು ಖಾಸಗಿ ತೋಟದ ಗೇಟ್ ಮುರಿದು ಹಾಕಿದ್ದು, ಗ್ರಾಮಸ್ಥರು ಭಯಬೀತರಾಗಿದ್ದಾರೆ.ಕೆಲ ದಿನಗಳಿಂದ ಕಾಡಾನೆಗಳು ತೋಟಗಳಲ್ಲಿ ಬೀಡು ಬಿಟ್ಟಿದ್ದು, ಕಾಡಾನೆಯನ್ನು ಕಾಡಿಗಟ್ಟಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಸಿದ್ದಾಪುರ ಪಾಲಿಬೆಟ್ಟ ರಸ್ತೆ ಹಾಗೂ ಕರಡಿಗೋಡು ಗ್ರಾಮದ ಕಾಫಿ ತೋಟಗಳಲ್ಲಿ ಕಾಡಾನೆಗಳು ಬೀಡುಬಿಟ್ಟಿದ್ದು ಅರಣ್ಯ ಇಲಾಖಾ ಸಿಬ್ಬಂದಿಗಳು ಹಾಗೂ ಆರ್.ಆರ್.ಟಿ. ತಂಡ ಕಾಡಾನೆಗಳನ್ನು ಅರಣ್ಯಕ್ಕೆ ಅಟ್ಟಿದರೂ ಕೂಡ ಕಾಡಾನೆಗಳು ಅರಣ್ಯದಿಂದ ಮರಳಿ ತೋಟಗಳಿಗೆ ಹಿಂತಿರುಗುತ್ತಿವೆÉ. ಈ ಹಿನ್ನೆಲೆಯಲ್ಲಿ ಸಿದ್ದಾಪುರ ಸುತ್ತಮುತ್ತಲಿನ ಪ್ರದೇಶದ ಕಾಫಿ ಬೆಳೆಗಾರರು ಹಾಗೂ ಕಾರ್ಮಿಕರು ಭಯಭೀತರಾಗಿದ್ದಾರೆ. ಆಟೋ ಸೇರಿದಂತೆ ವಾಹನ ಚಾಲಕರು ಸಂಜೆಯ ಸಮಯದಲ್ಲಿ ಬಾಡಿಗೆಗೆ ತೆರಳಲು ಹಿಂದೇಟು ಹಾಕುತ್ತಿದ್ದಾರೆ. ಕೂಡಲೇ ಶಾಶ್ವತ ಯೋಜನೆಯನ್ನು ರೂಪಿಸ ಬೇಕೆಂದು ಗ್ರಾಮಸ್ಥರು ಅರಣ್ಯ ಇಲಾಖೆಯನ್ನು ಒತ್ತಾಯಿಸಿದ್ದಾರೆ. - ವಾಸು.