ಮಡಿಕೇರಿ, ಏ. 22: ಶ್ರೀಲಂಕಾ ರಾಜಧಾನಿ ಕೊಲಂಬೋದಲ್ಲಿ ನಿನ್ನೆ ಸಂಭವಿಸಿರುವ ಸರಣಿ ಬಾಂಬ್ ಸ್ಫೋಟದಲ್ಲಿ ದಕ್ಷಿಣಕನ್ನಡದ ಮಹಿಳೆ ಮಾತ್ರವಲ್ಲದೆ ಬೆಂಗಳೂರಿನ ಕೆಲವರು ಮೃತರಾಗಿರುವ ದುರಂತ ಸಂಭವಿಸಿದೆ. ತಾ. 18 ರಂದು ರಾಜ್ಯದಲ್ಲಿ ನಡೆದ ಮೊದಲ ಹಂತದ ಚುನಾವಣೆ ಮುಗಿಸಿ ವಿಶ್ರಾಂತಿಗಾಗಿ ತೆರಳಿದ್ದ 7 ಮಂದಿ ರಾಜಕೀಯ ಪ್ರಮುಖರು ಕೂಡ ಕೊಲಂಬೋದಲ್ಲಿ ದಾಳಿಗೆ ಸಿಲುಕಿರುವ ಆತಂಕಕಾರಿ ಅಂಶ ಬೆಳಕಿಗೆ ಬಂದಿದೆ.ಈ ಬಗ್ಗೆ ಭಾರತದ ವಿದೇಶಾಂಗ ಸಚಿವೆ ಸುಷ್ಮಾಸ್ವರಾಜ್ ಖಚಿತ ಪಡಿಸಿದ್ದು, ಕರ್ನಾಟಕದ ಕನ್ನಡಿಗ ರೊಂದಿಗೆ ಇತರ ಭಾರತೀಯರನ್ನು ನಿರಂತರ ಸಂಪರ್ಕ ಸಾಧಿಸಿ ಲಂಕಾ ಸರಕಾರದಿಂದ ಮಾಹಿತಿ ಕಲೆ ಹಾಕಲಾಗುತ್ತಿದೆ. ಈ ವೇಳೆ ದಾಳಿಗೆ ಸಿಲುಕಿ ಬದುಕಿರುವವರು, ಮೃತರು, ಗಾಯಾಳುಗಳ ಕುರಿತು ತೀವ್ರ ನಿಗಾವಹಿಸಿ ಭಾರತದಿಂದ ಅಗತ್ಯ ನೆರವು ಘೋಷಿಸಲಾಗಿದೆ.ರಾಜ್ಯದ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಕೂಡ ತಮ್ಮ ಆಪ್ತ ವಲಯದ ಜೆಡಿಎಸ್ ಪ್ರಮುಖರು ಲಂಕಾದಲ್ಲಿ ಉಗ್ರರ ದಾಳಿಗೆ ಸಿಲುಕಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಗಳು ಹಾಗೂ ಪೊಲೀಸ್ ಮಹಾ ನಿರ್ದೇಶಕರು ಕೊಲಂಬೋ ಸರಕಾರದ ಉನ್ನತ ಅಧಿಕಾರಿಗಳೊಂದಿಗೆ ಸಂಪರ್ಕ ಸಾಧಿಸಿದ್ದಾರೆ.ನಂಟು ಶಂಕೆ : ಉನ್ನತ ಮೂಲಗಳ (ಮೊದಲ ಪುಟದಿಂದ) ಪ್ರಕಾರ ಶ್ರೀಲಂಕಾದ ರಾಜಧಾನಿಯಲ್ಲಿ ಮೂರು ಚರ್ಚ್ಗಳು ಸೇರಿದಂತೆ ನಾಲ್ಕೈದು ಪ್ರತಿಷ್ಠಿತ ಹೊಟೇಲ್ಗಳ ಮೂರು ಚರ್ಚ್ಗಳು ಸೇರಿದಂತೆ ನಾಲ್ಕೈದು ಪ್ರತಿಷ್ಠಿತ ಹೊಟೇಲ್ಗಳ - ಕರಾವಳಿ ನಂಟಿನ ಶಂಕೆಯೂ ವ್ಯಕ್ತಗೊಂಡಿದ್ದು, ಕಡಲಿನ ಮೂಲಕ ಇತ್ತ ವಿದ್ರೋಹಿಗಳು ನುಸುಳದಂತೆ ಕಣ್ಗಾವಲು ಇರಿಸಲಾಗುತ್ತಿದೆ ಎಂದು ಸುರಕ್ಷಾ ಪಡೆಗಳ ಮೂಲದಿಂದ ಗೊತ್ತಾಗಿದೆ. ಕೊಲಂಬೋ ಬಾಂಬ್ ದಾಳಿ ಬೆನ್ನಲ್ಲೇ ಒಟ್ಟಾರೆ ಶ್ರೀಲಂಕಾದಲ್ಲಿ ಹೈ ಅಲರ್ಟ್ ಸಹಿತ ಕಪ್ರ್ಯೂ ಜಾರಿ ಗೊಂಡಿದೆ. ಇತ್ತ ದಕ್ಷಿಣ ಭಾರತದ ಕಡಲ ತಡಿಯುದ್ದಕ್ಕೂ ಕಟ್ಟೆಚ್ಚರ ದೊಂದಿಗೆ ಭಯೋತ್ಪಾದಕರು ನುಸುಳ ದಂತೆ ಹೈಅಲರ್ಟ್ ಘೋಷಿಸಿದ್ದು, ಹಡಗುಗಳನ್ನು ಬಳಸಿ ಕರಾವಳಿಯತ್ತ ಆಗಮಿಸದಂತೆ ವ್ಯಾಪಕ ಮುಂಜಾಗ್ರತಾ ಕ್ರಮ ಕೈಗೊಂಡಿರುವದಾಗಿ ದೃಡಪಟ್ಟಿದೆ.