ಕಾಕೋಟುಪರಂಬು (ವೀರಾಜಪೇಟೆ), ಏ. 22: ಹಾಕಿ ಕೊಡಗು ಸಂಸ್ಥೆಯಿಂದ ಕಾಕೋಟುಪರಂಬು ಪ್ರಾಥಮಿಕ ಹಾಗೂ ಪ್ರೌಢಶಾಲಾ ಮ್ಯೆದಾನದಲ್ಲಿ ನಡೆಯುತ್ತಿರುವ ಕೊಡವ ಕೌಟುಂಬಿಕ ಹಾಕಿ ಪಂದ್ಯಾಟದಲ್ಲಿ ನೆರವಂಡ, ಚೆನ್ನಪಂಡ, ಚೊಟ್ಟೆರ, ಅಪ್ಪಂಡೆರಂಡ, ಕಳ್ಳಿಚಂಡ, ಅಮ್ಮಂಡ, ಐಚಂಡ, ಕಾಂಡೇರ, ಚೋಳಂಡ, ಕಾಳಿಮಾಡ, ಮದ್ರಿರ, ಚೌರಿರ ತಂಡಗಳು ಮುಂದಿನ ಸುತ್ತಿನ ಅರ್ಹತೆ ಪಡೆದುಕೊಂಡಿವೆ. ನೆರವಂಡ ಪ್ರವೀಣ್ ಪೆಮ್ಮಯ್ಯ ಹ್ಯಾಟ್ರಿಕ್ ಸಾಧನೆ ಮಾಡಿದರು.

ಮ್ಯೆದಾನ 1 ರಲ್ಲಿ ನಡೆದ ಪಂದ್ಯದಲ್ಲಿ ನೆರವಂಡ 5-1 ಗೊಲುಗಳಿಂದ ಕೈಬುಲಿರ ತಂಡವನ್ನು ಮಣಿಸಿತು. ನೆರವಂಡ ಪರ ಪ್ರವೀಣ್ 5(4,6,15,24,38ನಿ) ಗಳಲ್ಲಿ ಗೋಲು ಬಾರಿಸಿ ಹ್ಯಾಟ್ರಿಕ್ ಸಾಧನೆ ಮಾಡಿದರು. ಕ್ಯೆಬುಲಿರ ಪರ ಗಣಪತಿ(22ನಿ)ದಲ್ಲಿ ಗೋಲು ದಾಖಲಿಸಿದರು. ಚೆನ್ನಪಂಡ ತಂಡ ಮಲ್ಲಂಡ ತಂಡವನ್ನು 2-0 ಗೋಲುಗಳಿಂದ ಪರಾಭವಗೊಳಿಸಿತು. ಚೆನ್ನಪಂಡ ಪರ ನರೇನ್(16,34ನಿ)ದಲ್ಲಿ ಗೋಲು ಬಾರಿಸಿದರು.

ಚೊಟ್ಟೆರ ತಂಡ 2-0 ಗೋಲುಗಳಿಂದ ಕಾಡ್ಯಮಾಡ ತಂಡವನ್ನು ಪರಾಭವಗೊಳಿಸಿತು. ಚೊಟ್ಟೆರ ಪರ ಬಿಪಿನ್ 2(11,25ನಿ)ದಲ್ಲಿ ಗೋಲು ಬಾರಿಸಿದರು. ಅಪ್ಪಂಡೇರಂಡ ತಂಡ ಕರ್ತಚ್ಚಿರ ತಂಡವನ್ನು 4-0 ಗೋಲಿನಿಂದ ಮಣಿಸಿತು. ಅಪ್ಪಂಡೇರಂಡ ಪರ ವರುಣ್(9ನಿ), ಬೋಪಣ್ಣ 2(12,13,ನಿ), ವಿನೇಶ್(33ನಿ)ದಲ್ಲಿ ಗೋಲು ಹೊಡೆದರು. ಕಳ್ಳಿಚಂಡ ತಂಡ ಮಳವಂಡ ತಂಡವನ್ನು 4-1 ಗೋಲುಗಳಿಂದ ಮಣಿಸಿತು. ಕಳ್ಳಿಚಂಡ ಪರ ಸಾವಂತ್ 2(6,34ನಿ), ಬೋಪಣ್ಣ 2(20,24ನಿ), ಮಳವಂಡ ಪರ ಸ್ಮರಣ್(15ನಿ)ದಲ್ಲಿ ಗೋಲು ದಾಖಲಿಸಿದರು.

ಕುಲ್ಲಚಂಡ ತಂಡ ಬಾರದ ಕಾರಣ ಆಯೋಜಕರು ಅಮ್ಮಂಡ ತಂಡವನ್ನು ವಾಕ್‍ಓವರ್ ಮೂಲಕ ವಿಜಯಿ ಎಂದು ಘೋಷಿಸಿದರು. ಐಚಂಡ ತಂಡ 1-0 ಗೋಲಿನಿಂದ ಕರೋಟಿರ ತಂಡವನ್ನು ಪರಾಭವ ಗೊಳಿಸಿತು. ಐಚಂಡ ಪರ ಮಾಚಯ್ಯ(34ನಿ)ದಲ್ಲಿ ಗೋಲು ದಾಖಲಿಸಿ ಜಯ ತಂದು ಕೊಟ್ಟರು. ಮೈದಾನ 2 ರಲ್ಲಿ ನಡೆದ ಪಂದ್ಯಾಟದಲ್ಲಿ ಕಾಂಡೇರ ತಂಡ 2-1 ಗೋಲುಗಳಿಂದ ಐತಿಚಂಡ ತಂಡವನ್ನು ಮಣಿಸಿತು, ಕಾಂಡೇರ ಪರ ಡಿಂಪು(6ನಿ), ರಕ್ಷೀತ್(35ನಿ), ಐತಿಚಂಡ ಪರ ಪೊನ್ನಣ್ಣ (30ನಿ)ದಲ್ಲಿ ಗೋಲು ಬಾರಿಸಿದರು.

ಚೋಳಂಡ ತಂಡ ಕೊಲ್ಲಿರ ತಂಡವನ್ನು 4-0 ಗೋಲುಗಳಿಂದ ಪರಾಭವಗೊಳಿಸಿತು. ಚೋಳಂಡ ಪರ ಅಮಾನ್3(5,17,34ನಿ), ಅಚ್ಚಪ್ಪ(18ನಿ)ದಲ್ಲಿ ಗೋಲು ಗಳಿಸಿದರು. ಕಾಳಿಮಾಡ ತಂಡ 2-1 ಗೋಲುಗಳಿಂದ ಮಾದಂಡ ತಂಡವನ್ನು ಸೋಲಿಸಿತು. ಕಾಳಿಮಾಡ ಪರ ಶರತ್ (8, 21ನಿ), ಮಾದಂಡ ಪರ ಮಿಲನ್(13ನಿ)ದಲ್ಲಿ ಗೋಲು ಬಾರಿಸಿ ಗೋಲಿನ ಅಂತರವನ್ನು ಕಡಿಮೆ ಮಾಡಿದರು. ಮದ್ರಿರ ತಂಡ ಕಲ್ಲುಮಾಡಂಡ ತಂಡವನ್ನು 3-0 ಗೋಲುಗಳಿಂದ ಪರಾಭವ ಗೊಳಿಸಿತು. ಮದ್ರಿರ ಪರ ಪ್ರವೀಣ್ (17ನಿ),ನಿಕಿಲ್(29ನಿ), ಗಣಪತಿ (36ನಿ)ದಲ್ಲಿ ಗೋಲು ಬಾರಿಸಿದರು.

ಚೌರಿರ ತಂಡ ಕೇಚೆಟ್ಟಿರ ತಂಡವನ್ನು 4-1 ಗೋಲುಗಳಿಂದ ಸೋಲಿಸಿತು. ಚೌರಿರ ಪರ ಶಯನ್(11ನಿ), ಧನುಶ್(19ನಿ), ಸೂರಜ್(24ನಿ), ಮೋಹನ್(35ನಿ), ಕೇಚೇಟ್ಟಿರ ಪರ ವಿಜಯ್(35ನಿ)ದಲ್ಲಿ ಗೋಲು ದಾಖಲಿಸಿ ಮುಂದಿನ ಸುತ್ತಿನ ಅರ್ಹತೆಯಿಂದ ವಂಚಿತರಾದರು.