ಮಡಿಕೇರಿ, ಏ.22 : ಸಮಸ್ತ ಜಂಇಯತುಲ್ ಉಲಮಾದ ಪರಮೋಚ್ಛ ಅಧ್ಯಕ್ಷರಾದ ರಈಸುಲ್ ಉಲಮಾ ಶೈಖುನಾ ಸುಲೈಮಾನ್ ಉಸ್ತಾದ್ ಅವರು ತಾ.25ರಂದು ಕೊಡಗಿಗೆ ಆಗಮಿಸಲಿದ್ದು, ಹೊದವಾಡದ ಆಜಾದ್ ನಗರದಲ್ಲಿರುವ ಲಿವಾವುಶ್ಯೆರೀಅ ದರ್ಸ್ ವಾರ್ಷಿಕ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಮಹಮ್ಮದ್ ಶಾಫಿ ಕೊಟ್ಟಮುಡಿ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಸುಮಾರು 11 ವರ್ಷಗಳ ಬಳಿಕ ಉಸ್ತಾದ್ ಅವರು ಕೊಡಗಿಗೆ ಆಗಮಿಸುತ್ತಿದ್ದು, ತಾ.25ರಂದು ರಾತ್ರಿ 8 ಗಂಟೆಗೆ ಆಜಾದ್‍ನಗರ ಹೈದ್ರೂಸ್ ಜುಮ್ಮಾ ಮಸೀದಿ ಆವರಣದಲ್ಲಿ ನಡೆಯಲಿರುವ ಬೃಹತ್ ಸ್ವಲಾತ್ ಮಜ್ಲಿಸ್ ಮತ್ತು ಪ್ರವಚನ ಕಾರ್ಯಕ್ರಮದ ನೇತೃತ್ವ ವಹಿಸಲಿದ್ದಾರೆ ಎಂದು ಅವರು ವಿವರಿಸಿದರು.
ಕಾರ್ಯಕ್ರಮದಲ್ಲಿ ಇವರೊಂದಿಗೆ ಹಲವಾರು ಉಲಮಾ ಸಾದಾತುಗಳೂ ಭಾಗವಹಿಸಲಿರುವದಾಗಿ ಅವರು ನುಡಿದರು.
ಮಹಮ್ಮದ್ ಸಿನಾನ್ ಅವರು ಮಾತನಾಡಿ, ಅಂದು ಮಧ್ಯಾಹ್ನ ಎಸ್‍ಎಸ್‍ಎಫ್ ಮಡಿಕೇರಿ ವಿಭಾಗದ ತರಬೇತಿ ಶಿಬಿರ ಹೈದ್ರೂಸ್ ಜುಮ್ಮಾ ಮಸೀದಿ ಆವರಣದಲ್ಲಿ ನಡೆಯಲಿದ್ದು, ಕೇರಳದ ಜಾಮಿಯ ಇಯಾಹುತುನ್ನದ ಮುದರ್ರಿಸ್ ಅಬ್ದುಲ್ಲಾ ಅಹ್ಸನಿ ಅವರು ಮಾರ್ಗದರ್ಶನ ಮಾಡಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷೆಯನ್ನು ಎಸ್‍ವೈಎಸ್‍ನ ಜಿಲ್ಲಾ ಮುಖ್ಯಸ್ಥ ಉಮರ್ ಸಖಾಫಿ ವಹಿಸಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಹೈದ್ರೂಸ್ ಜುಮ್ಮಾ ಮಸೀದಿ ಅಧ್ಯಕ್ಷ ಟಿ.ಎಂ. ಉಸ್ಮಾನ್, ಹಫೀಳ್ ಅಮ್ಜದಿ, ಅಬ್ದುಸಲಾಂ ಹೊದವಾಡ ಹಾಗೂ ಮಸೀದಿ ಸಹ ಕಾರ್ಯದರ್ಶಿ ಸಿ.ಎ.ಅಸ್ಲಾಂ ಉಪಸ್ಥಿತರಿದ್ದರು.