ನಾಪೋಕ್ಲು, ಏ. 22 : ಇಲ್ಲಿನ ಕೊಡವ ಸಮಾಜದ ಕ್ರೀಡಾ ಸಾಂಸ್ಕøತಿಕ ಮತ್ತು ಮನೋರಂಜನಾ ಕೂಟದ ವಾರ್ಷಿಕ ಮಹಾ ಸಬಾ ಕಾರ್ಯಕ್ರಮದಲ್ಲಿ ಮಂಡಳಿಯ ಅಧ್ಯಕ್ಷರನ್ನಾಗಿ ಬಿದ್ದಾಟಂಡ ಎಸ್. ತಮ್ಮಯ್ಯ, ಉಪಾಧ್ಯಕ್ಷರಾಗಿ ಮಂಡೀರ ರಾಜಪ್ಪಚೆಂಗಪ್ಪ, ಗೌರವ ಕಾರ್ಯದರ್ಶಿಯಾಗಿ ನಾಯಕಂಡ ದೀಪು ಚೆಂಗಪ್ಪ, ಜಂಟಿ ಕಾರ್ಯದರ್ಶಿಯಾಗಿ ಬಾಚಮಂಡ ಲವ ಚಿಣ್ಣಪ್ಪ, ಹಾಗೂ ಖಜಾಂಚಿಯಾಗಿ ಕಲಿಯಂಡ ಹ್ಯಾರಿ ಮಂದಣ್ಣ ಅವಿರೋಧವಾಗಿ ಆಯ್ಕೆಯಾದರು. ಬಿದ್ದಂಡ ತೇಜಕುಮಾರ್, ಕೊಂಡಿರ ನಂದಕುಮಾರ್, ಬೊಪ್ಪೇರ ಜಯ ಉತ್ತಪ್ಪ, ಮುಕ್ಕಾಟಿರ ರಘುಸುಬ್ರಮಣಿ, ಅರೆಯಡ ರತ್ನಪೆಮ್ಮಯ್ಯ, ಕೇಟೋಳಿರ ಬೀನಾ ಸದ, ಕೇಲೆಟಿರ ದಿವ್ಯಮುತ್ತಪ್ಪ ಸದಸ್ಯರಾಗಿ ಹಾಗೂ ಕೊಡವ ಸಮಾಜದಿಂದ ಉಪಾಧ್ಯಕ್ಷ ಮಾಳೆಯಂಡ ಅಯ್ಯಪ್ಪ, ಅಪ್ಪಾರಂಡ ಸುನಿತ ಅಯ್ಯಪ್ಪ, ಮಾಚೆಟ್ಟೀರ ಕುಶುಕುಶಾಲಪ್ಪ ಆಯ್ಕೆಯಾಗಿದ್ದಾರೆ.