ಮಡಿಕೇರಿ, ಏ. 22: ನೇತಾಜಿ ಯುವತಿ ಮಂಡಳಿಯ 2019-20ನೇ ಸಾಲಿನ ಮಹಾಸಭೆ ಇತ್ತೀಚೆಗೆ ನೇತಾಜಿ ಯುವಕ ಮಂಡಲದ ಸಭಾಂಗಣದಲ್ಲಿ ನೇತಾಜಿ ಯುವತಿ ಮಂಡಳಿ ಅಧ್ಯಕ್ಷೆ ಮಂಜುಳ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ನೂತನ ಕಾರ್ಯಕಾರಿ ಸಮಿತಿ ರಚನೆಯನ್ನು ಪದ್ಮ ರವಿ ಹಾಗೂ ಸುಲೋಚನ ಅವರು ನಡೆಸಿಕೊಟ್ಟರು.

ಅಧ್ಯಕ್ಷರಾಗಿ ಮಂಜುಳ ಆನಂದ್ ಪುನರಾಯ್ಕೆ ಗೊಂಡಿದ್ದು, ಉಪಾಧ್ಯಕ್ಷ ರಾಗಿ ಬಿ.ಹೆಚ್. ವಿಮಲಾಕ್ಷಿ, ಕಾರ್ಯದರ್ಶಿಯಾಗಿ ಬಿ. ವಿ. ದೇವಕಿ, ಸಹ ಕಾರ್ಯದರ್ಶಿ ಯಾಗಿ ಎಸ್.ಎನ್. ಸರಸ್ವತಿ, ಖಜಾಂಚಿಯಾಗಿ ರೀಟಾ ಲಿಂಗಪ್ಪ ಆಯ್ಕೆಯಾಗಿದ್ದಾರೆ.

ಕ್ರೀಡಾ ಕಾರ್ಯದರ್ಶಿಯಾಗಿ ಮಧುರ ಆನಂದ್, ಸಾಂಸ್ಕøತಿಕ ಕಾರ್ಯದರ್ಶಿಯಾಗಿ ಸುನಂದ, ಸಂಘಟನಾ ಕಾರ್ಯದರ್ಶಿಯಾಗಿ ಟಿ.ಜಿ. ರತ್ನ ಹಾಗೂ ಆಂತರಿಕ ಲೆಕ್ಕ ಪರಿಶೋಧಕರಾಗಿ ಪದ್ಮ ರವಿ ಆಯ್ಕೆಗೊಂಡರು. ಮಾಜಿ ಸಂಘಟನಾ ಕಾರ್ಯದರ್ಶಿ ಪಿ.ವಿ. ಮೇರಿ ವಂದಿಸಿದರು.