ಮಡಿಕೇರಿ, ಏ.22: ಇದೇ ಪ್ರಥಮ ಬಾರಿಗೆ ಕೊಡವ ಕುಟುಂಬಗಳ ‘ಕಂಜಿತಂಡ ಶಟಲ್ ಬ್ಯಾಡ್ಮಿಂಟನ್ ಕಪ್-2019’ ಡಬಲ್ಸ್ ಪಂದ್ಯಾವಳಿಯು ಹೊದಕೇರಿಯ ವಿ. ಬಾಡಗದಲ್ಲಿ ಐನ್ ಮನೆಯನ್ನು ಹೊಂದಿರುವ ಕಂಜಿತಂಡ ಕುಟುಂಬದ ವತಿಯಿಂದ ಮೇ1 ರಿಂದ 5ರವರೆಗೆ ಬಿಟ್ಟಂಗಾಲದ ಹೆಲ್ತ್ ಕ್ಲಬ್ ಕ್ರೀಡಾಂಗಣದಲ್ಲಿ ನಡೆಯಲಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಂಜಿತಂಡ ಕುಟುಂಬದ ಅಧ್ಯಕ್ಷÀ ಕಂಜಿತಂಡ ಅಯ್ಯಪ್ಪ, ಪ್ರತಿಭಾವಂತ ಶಟಲ್ ಬ್ಯಾಡ್ಮಿಂಟನ್ ಆಟಗಾರರನ್ನು ಗುರುತಿಸಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಆಯೋಜಿಸಿರುವ ಈ ಪಂದ್ಯಾವಳಿಯಲ್ಲಿ ಒಂದು ಕೊಡವ ಕುಟುಂಬದಿಂದ ಒಂದು ತಂಡ ಭಾಗವಹಿಸಲು ಮಾತ್ರ ಅವಕಾಶವನ್ನು ನೀಡಲಾಗಿದೆ. ತಂಡದಲ್ಲಿ ವಯೋಮಿತಿಯ ಭೇದವಿಲ್ಲದೆ ಪುರುಷರು ಮತ್ತು ಮಹಿಳೆಯರು ಭಾಗವಹಿಸಬಹುದಾಗಿದೆ ಎಂದರು.
ಪಂದ್ಯಾವಳಿಯಲ್ಲಿ 80 ರಿಂದ 100 ತಂಡಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ. ವಿಜೇತ ತಂಡವನ್ನು ಒಳಗೊಂಡಂತೆ ಮೊದಲ ಮೂರು ತಂಡಗಳಿಗೆ ನಗದು ಹಾಗೂ ಆಕರ್ಷಕ ಟ್ರೋಫಿಯನ್ನು ನೀಡಲಾಗುತ್ತದೆ. ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲು ಪ್ರತಿ ತಂಡಕ್ಕೆ 800ರೂ. ಪ್ರವೇಶ ಶುಲ್ಕವÀನ್ನು ನಿಗದಿಪಡಿಸಲಾಗಿದೆ. ಹೆಸರು ನೋಂದಾಯಿಸಿಕೊಳ್ಳಲು ಏ.27 ಕೊನೆಯ ದಿನಾಂಕವಾಗಿದೆ. ಹೆಚ್ಚಿನ ಮಾಹಿತಿಗಾಗಿ ಪಂದ್ಯಾವಳಿ 9535536795, 9008433094ನ್ನು ಸಂಪರ್ಕಿಸಬಹುದಾಗಿದೆಯೆಂದು ತಿಳಿಸಿದರು.
ಜಿಲ್ಲೆಯ ಹಲವು ಕ್ರೀಡಾ ಪಟುಗಳು ವಿವಿಧ ಕ್ರೀಡೆಯಲ್ಲಿ ಭಾಗವಹಿಸಿ ರಾಷ್ಟ್ರ ಮಟ್ಟದ ಕ್ರೀಡಾ ಕೂಟದಲ್ಲಿ ಭಾಗವಹಿಸಿ ದೇಶಕ್ಕೆ ಗೌರವ ಮತ್ತು ಹೆಮ್ಮೆಯ ಕೆಲಸವನ್ನು ಮಾಡಿರುವದು ಶ್ಲಾಘನೀಯ. ಆದರೆ, ಅನೇಕ ಕ್ರೀಡಾ ಪಟುಗಳು ತಮ್ಮ ಪ್ರತಿಭಾ ಪ್ರದರ್ಶನಕ್ಕೆ ಅವಕಾಶ ಸಿಗದೆ ವಂಚಿತರಾಗಿದ್ದಾರೆ. ಈ ನಿಟ್ಟಿನಲ್ಲಿ ಕ್ರೀಡಾಭಿಮಾನಿಗಳಿಗೆ ಮತ್ತು ಕ್ರೀಡಾ ಪಟುಗಳಿಗೆ ಅವಕಾಶ ನೀಡುವ ನಿಟ್ಟಿನಲ್ಲಿ ಕಂಜಿತಂಡ ಕುಟುಂಬದ ವತಿಯಿಂದ ಪ್ರಪ್ರಥಮವಾಗಿ ಶÀಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಕಂಜಿತಂಡ ಬ್ಯಾಡ್ಮಿಂಟನ್ ಪಂದ್ಯಾವಳಿ ಆಯೋಜನಾ ಸಮಿತಿ ಅಧ್ಯಕ್ಷರಾದ ಕಂಜಿತಂಡ ಕೆ. ಪ್ರಕಾಶ್ ಮಂದಣ್ಣ, ಸದಸ್ಯರಾದ ಚೇಂದ್ರಿಮಾಡ ಮಧು ಗಣಪತಿ, ಕಂಜಿತಂಡ ಚರಣ್ ಉಪಸ್ಥಿತರಿದ್ದರು.