ವೀರಾಜಪೇಟೆ, ಏ. 22 : ವಿಶೇಷ ಚೇತನರನ್ನು ಮುಖ್ಯ ವಾಹಿನಿಗೆ ತರುವ ನಿಟ್ಟಿನಲ್ಲಿ ಅಮ್ಮತ್ತಿ ಮೂಲದ ರಿ ಬಿಲ್ಡ್ ಕೊಡಗು ಸಂಸ್ಥೆಯು ಪುನಶ್ಚೇತನ ಚಾರಿಟ್ರೇಬಲ್ ಟ್ರಸ್ಟ್‍ಗೆ ಉದಾರವಾಗಿ ವೀಲ್‍ಚೇರ್ ನೀಡಿದೆ. ನಾಪೋಕ್ಲು ಪಟ್ಟಣದಲ್ಲಿ ರುವ ಪುನಶ್ಚೇತನ ಚಾರಿಟ್ರೇಬಲ್ ಟ್ರಸ್ಟ್ ಅಶ್ರಯದ ಶಾಲೆಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಅಮ್ಮತ್ತಿಯ ರೀ ಬಿಲ್ಡ್ ಸಂಸ್ಥೆಯು ಎರಡು ವೀಲ್ ಚೇರ್ ಅನ್ನು ಕೊಡುಗೆಯಾಗಿ ನೀಡಿತ್ತು.
ಸಮಾರಂಭದಲ್ಲಿ ಸಂಸ್ಥೆಯ ಮುಖ್ಯಸ್ಥ ಕೆ. ಎ. ಕುಶಾಲಪ್ಪ ಚಾರಿಟ್ರೇಬಲ್ ಟ್ರಸ್ಟ್‍ನ ಮುಖ್ಯಸ್ಥರಾದ ಬಾಳೆಯಡ ವಿದ್ಯ, ಪಾಲಂದಿರ ರಾಧ, ರೀನಿಶ್ ಮತ್ತು ಶಿಕ್ಷಕರುಗಳಾದ ಆಸ್ಮ ಮತ್ತು ಪ್ರೀತಿ ಉಪಸ್ಥಿತರಿದ್ದರು.