ಮಡಿಕೇರಿ, ಏ. 22: ಇಲ್ಲಿನ ಗೌಳಿಬೀದಿಯ ಶ್ರೀ ಕಂಚಿಕಾಮಾಕ್ಷಿಯಮ್ಮ ಹಾಗೂ ಮಾರಮ್ಮ ದೇವಾಲಯದ 12ನೇ ವರ್ಷದ ಪುನರ್ ಪ್ರತಿಷ್ಠಾಪನಾ ವಾರ್ಷಿಕೋತ್ಸವವು ಇಂದು ಮುಕ್ತಾಯಗೊಂಡಿತು. ಸನ್ನಿಧಿಯಲ್ಲಿ ಬೆಳಿಗ್ಗೆ ಕೇರಳದ ಪಯ್ಯವೂರಿನ ಈಶ್ವರ ನಂಬೂದರಿ ನೇತೃತ್ವದಲ್ಲಿ ಗಣಪತಿ ಹೋಮ, ಬ್ರಹ್ಮಕಲಶ ಪೂಜೆ, ಕಲಶಾಭಿಷೇಕ, ಮಹಾ ಕುಂಬಾಭಿಷೇಕದೊಂದಿಗೆ ಮಹಾಪೂಜೆ ನೆರವೇರಿಸಲಾಯಿತು.
ತಾ. 20 ರಿಂದ ಮೂರು ದಿನಗಳ ತನಕ ವಿವಿಧ ಧಾರ್ಮಿಕ ಕೈಂಕರ್ಯಗಳೊಂದಿಗೆ ಪೂಜಾಧಿಗಳನ್ನು ನೆರವೇರಿಸಲಾಯಿತು. ಕಂಚಿಕಾಮಾಕ್ಷಿ ಮಿತ್ರ ಮಂಡಳಿ ವತಿಯಿಂದ, ದಸರಾ ಮಂಟಪೋತ್ಸವ ಸಂದರ್ಭ ಲಭಿಸಿದ್ದ ಚಿನ್ನದ ಬಹುಮಾನಗಳನ್ನು ಕ್ರೋಢೀಕರಿಸಿ, ಇಂದು ದೇವಿಗೆ ಮಾಂಗಲ್ಯ ಸರ ಸಮರ್ಪಿಸಲಾಯಿತು.
ವಾರ್ಷಿಕೋತ್ಸವ ಪೂಜಾ ಕೈಂಕರ್ಯಗಳ ಬಳಿಕ ಮಹಾಪೂಜೆಯೊಂದಿಗೆ ಸದ್ಭಕ್ತರಿಗೆ ಪ್ರಸಾದ, ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.