ಕುಶಾಲನಗರ, ಏ. 23: ಟಿವಿ ಚಾನಲ್ ಹೆಸರು ಬಳಸಿಕೊಂಡು ನಕಲಿ ಪತ್ರಕರ್ತನೊಬ್ಬ ಕುಶಾಲನಗರ-ಬೈಲುಕೊಪ್ಪ ವ್ಯಾಪ್ತಿಯಲ್ಲಿ ಹಣ ವಸೂಲಾತಿಯಲ್ಲಿ ತೊಡಗಿರುವ ಬಗ್ಗೆ ಕುಶಾಲನಗರ ಮತ್ತು ಬೈಲುಕೊಪ್ಪ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಸ್ಥಳೀಯ ಟಿವಿ ಚಾನಲ್ ಪ್ರಮುಖ ಹೆಚ್.ಎಂ. ರಘು ದೂರು ನೀಡಿದ್ದು ಕೃಷ್ಣ ಎಂಬಾತ ಟಿವಿ ಹೆಸರು ಬಳಸಿ ಗುತ್ತಿಗೆದಾರರು, ಕಲ್ಲುಕೋರೆ ಮತ್ತು ಅಧಿಕಾರಿಗಳಿಂದ ಹಣ ವಸೂಲಿ ಮಾಡುತ್ತಿರುವದಾಗಿ ದೂರಿನಲ್ಲಿ ತಿಳಿಸಿದ್ದು, ಈತನ ಮೇಲೆ ಕಾನೂನು ಕ್ರಮಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.
ಕಳಪೆ ಗುಣಮಟ್ಟದ ಕಾಮಗಾರಿ ನಡೆಸುತ್ತಿರುವದಾಗಿ ಬೆದರಿಸಿ ಕಾವೇರಿ ನೀರಾವರಿ ನಿಗಮದ ಇಂಜಿನಿಯರ್ ಒಬ್ಬರಿಂದ ರೂ. 25 ಸಾವಿರ ಹಣದ ಬೇಡಿಕೆಯಿಟ್ಟಿದ್ದು ನಂತರ ವಿಚಾರಣೆ ಸಂದರ್ಭ ಕಕ್ಕಾಬಿಕ್ಕಿಯಾಗಿ ಪರಾರಿಯಾಗಿರುವದಾಗಿ ದೂರಿನಲ್ಲಿ ತಿಳಿಸಿದ್ದಾರೆ.