ದುಗ್ಗಳ ಸದಾನಂದ ನಾಪೆÉÇೀಕು ಏ.23: ಪ್ರಕೃತಿ ವಿಕೋಪ ನೆಪದಿಂದ 22 ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ಕೊಡವ ಕುಟುಂಬಗಳ ಕೌಟುಂಬಿಕ ಹಾಕಿ ಪಂದ್ಯಾಟವನ್ನು ಕೊಡವ ಹಾಕಿ ಅಕಾಡೆಮಿ ಕೈಬಿಟ್ಟಿರುವದು ಉತ್ತಮ ಬೆಳವಣಿಗೆ ಅಲ್ಲ. ಇದರ ಲಾಭ ಯಾರಿಗೆ ಇದರಿಂದ ಜನಾಂಗದ ಪಂದ್ಯಾಟ ತನ್ನ ರೆಕಾರ್ಡನ್ನು ಕಳೆದು ಕೊಂಡಿದೆ ಎಂದು ಪ್ರೆಸ್‍ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಹೇಳಿದರು. ಅವರು ಪ್ರಕೃತಿ ವಿಕೋಪದಿಂದ ತತ್ತರಿಸಿದ ಪ್ರದೇಶದ 14 ಕುಟುಂಬಗಳಿಗೆ ಅವರ ಕಷ್ಟವನ್ನು ಮರೆಯಲು ಕಕ್ಕಬೆಯ ಹೈಲ್ಯಾಂಡರ್ಸ್ ಕ್ಲಬ್ ವತಿಯಿಂದ ನಾಪೆÉÇೀಕ್ಲು ಚೆರಿಯಪರಂಬು ಬಳಿಯ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಏರ್ಪಡಿಸಿರುವ ಇನ್ವಿಟೇಷನ್ ಹಾಕಿ ಪಂದ್ಯಾಟದಲ್ಲಿ ಮುಖ್ಯ ಅಥಿತಿಯಾಗಿ ಆಗಮಿಸಿ ಮಾತನಾಡಿದರು. ಪ್ರಕೃತಿ ವಿಕೋಪದಿಂದ ತಮ್ಮ ಆಸ್ತಿಯನ್ನು ಕಳೆದಕೊಂಡವರಿಗೆ ಕೊಡಗಿನ ದಾನಿಗಳು ನೆರವನ್ನು ನೀಡಿ ಅವರ ಬೆಂಬಲಕ್ಕೆ ನಿಂತಿದ್ದು ಇಂತಹ ಸಂದರ್ಭ ಕೊಡಗಿನಲ್ಲಿ 22 ವರ್ಷಗಳಿಂದ ವಿಜೃಂಭಣೆಯಿಂದ ನಡೆಸುತ್ತಾ (ಮೊದಲ ಪುಟದಿಂದ) ಬಂದಿರುವ ಹಾಕಿ ಹಬ್ಬವನ್ನು ನಡೆಸದೇ ಇದ್ದು ಈಗ ಕೊಡವ ಕುಟುಂಬಗಳು ಹಾಕಿ ಕೊಡಗು ಸಂಸ್ಥೆಯ ಹಾಕಿ. ಹಬ್ಬದಲ್ಲಿ ಪಾಲ್ಗೊಂಡಿವೆ. ಇದರಿಂದ ಕೊಡವ ಹಾಕಿ ಅಕಾಡೆಮಿ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳಲು ಕಾರಣವಾಗಿದೆ ಎಂದರು. ಕಕ್ಕಬೆ ಹೈಲ್ಯಾಂಡರ್ಸ್ ಇಂತಹ ಸಂದರ್ಭ ನೊಂದ ಕುಟುಂಬಗಳಿಗೆ ಹಾಕಿ ಪಂದ್ಯಾಟವನ್ನು ಏರ್ಪಡಿಸಿರುವದು ಸಂತೋಷದ ವಿಚಾರ ಎಂದರು.

ಪಂದ್ಯಾಟವನ್ನು ಸ್ಟಿಕ್ ಮೂಲಕ ಚೆಂಡನ್ನು ತಳ್ಳಿ ಉದ್ಘಾಟಿಸಿದ ಕೊಡವ ಹಾಕಿ ಅಕಾಡೆಮಿ ಉಪಾಧ್ಯಕ್ಷ ಕಲಿಯಂಡ ನಾಣಯ್ಯ ಮಾತನಾಡಿ, ಕೊಡಗು ಹಾಕಿ ಹಬ್ಬದ ತವರೂರು, ಇಲ್ಲಿನ ಕ್ರೀಡಾಪಟುಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ ಆಡಿ ಕೊಡಗಿಗೆ ಹೆಸರನ್ನು ತಂದಿದ್ದಾರೆ ಎಂದರು, ನೊಂದ ಕುಟುಂಬಗಳಿಗೆ ಪಂದ್ಯಾಟವನ್ನು ಆಯೋಜಿಸಿ ಅವರನ್ನು ರಂಜಿಸಲು ಹೈಲ್ಯಾಂಡರ್ಸ್ ಕ್ಲಬ್‍ನವರು ಇಂತಹ ಪಂದ್ಯಾಟವನ್ನು ಆಯೋಜಿಸಿರುವದಕ್ಕೆ ಅಭಿನಂದನೆ ಸಲ್ಲಿಸಿದರು.

ಭಾಗಮಂಡಲ ತಲಕಾವೇರಿ-ಭಗಂಡೇಶ್ವರ ದೇವಾಲಯ ಸಮಿತಿಯ ಅಧ್ಯಕ್ಷ ಬಿದ್ದಾಟಂಡ ತಮ್ಮಯ್ಯ ಮಾತನಾಡಿ, ಸುಸಜ್ಜಿತ ಮೈದಾನವನ್ನು ನಾವುಗಳು ಅಭಿವೃದ್ಧಿಗೊಳಿಸಿದ್ದೇವೆ. ಇದನ್ನು ಉಳಿಸಿಕೊಳ್ಳುವ ಜವಾಬ್ದಾರಿ ಎಲ್ಲರದಾಗಿದೆ ಎಂದು ಹೇಳಿದರು. ಇಂತಹ ಕ್ರೀಡಾಂಗಣದಲ್ಲಿ ಕಕ್ಕಬೆ ಕ್ಲಬ್ ಹಾಕಿ ಪಂದ್ಯಾಟ ಆಯೋಜಿಸಿ ಸಂತ್ರಸ್ತ ಕುಟುಂಬದವರ ಕಣ್ಣು ವರೆಸುವ ಕೆಲಸ ಮಾಡಿದ್ದೀರಾ ಎಂದು ಅಭಿನಂದನೆ ಸಲ್ಲಿಸಿದರು.

ನಡಿಕೇರಿಯಂಡ ತೇಜ್ ಪೂವಯ್ಯ ಕೊಡಗಿನ ಅಭಿವೃದ್ಧಿ ಮತ್ತು ಕಾಫಿ, ಕರಿಮೆಣಸು ಬೆಳೆಗಳ ವಿಷಯ ಆಧಾರಿಸಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹೈಲ್ಯಾಂಡರ್ಸ್ ಕ್ಲಬ್ ಅಧ್ಯಕ್ಷ ಅಪ್ಪಾರಂಡ ಸಾಗರ್ ಗಣಪತಿ ವಹಿಸಿದ್ದರು. ವೇದಿಕೆಯಲ್ಲಿ ಪ್ರಮುಖರಾದ ಕುಲ್ಲೇಟಿರ ಶಂಭು ಮಂದಪ್ಪ, ಕೇಟೋಳಿರ ಹರೀಶ್ ಪೂವಯ್ಯ, ಕಾಡ್ಯಮಾಡ ಮನು ಸೋಮಯ್ಯ, ಕುಲ್ಲೇಟಿರ ಅರುಣ ಬೇಬ, ಡಾ|| ಪೂವಯ್ಯ, ಅದೇಂಗಡ ತೇಜ, ರಘು ಸೋಮಯ್ಯ, ನಾಟೋಳಂಡ ಶಂಭು, ಕಲಿಯಂಡ ನವೀನ್, ಚಕ್ಕೇರ ಸಚಿನ್, ಚೋಟ್ಟೇರ ಅಯ್ಯಪ್ಪ, ಅಪ್ಪಾರಂಡ ಅಪ್ಪಯ್ಯ, ಕೇಟೋಳಿರ ಕುಟ್ಟಪ್ಪ, ಚಕ್ಕೇರ ಸಚಿನ್ ಇದ್ದರು.

ವೀಕ್ಷಕ ವಿವರಣೆಗಾರರಾಗಿ ಚೆಪ್ಪುಡೀರ ಕಾರ್ಯಪ್ಪ, ಮೂಡೇರ ಕಾಳಯ್ಯ, ಅರೆಯಡ ಬಬಿತಾ ದೇವಯ್ಯ ಇದ್ದರು.

ಉದ್ಘಾಟನಾ ಪಂದ್ಯಾಟವು ಪಾಸುರ ಮತ್ತು ಮುದ್ದಂಡ ತಂಡಗಳ ನಡುವೆ ನಡೆದು ಪಾಸುರ ತಂಡವು ಮುತ್ತಮ್ಮನವರ ಎರಡು ಗೋಲು ಸೇರಿ 3-0 ರಿಂದ ಜಯ ಸಾಧಿಸಿತು. ನಂತರದ ಪಂದ್ಯಾದಲ್ಲಿ ಮುಕ್ಕಾಟಿರ ತಂಡವು ಚೊಟ್ಟೇರ ತಂಡವನ್ನು 4-0 ಗೋಲುಗಳಿಂದ ಸೋಲಿಸಿತು.

ನಂತರ ವಾರಿಯರ್ಸ್ ತಂಡದ ನಡುವೆ ನಡೆದ ಪಂದ್ಯದಲ್ಲಿ ಚೆಪ್ಪುಡೀರ ಮತ್ತು ಅಂಜಪರವಂಡ ತಂಡಗಳ ನಡುವೆ ನಡೆದು ಉಭಯ ತಂಡಗಳು 2-2 ಸಮಬಲ ಸಾಧಿಸಿದವು. ನಂತರ ಪಂದ್ಯದಲ್ಲಿ ಕಲಿಯಂಡ ತಂಡವು ಕನ್ನಂಡ ತಂಡವನ್ನು 1-0 ಗೋಲುಗಳಿಂದ ಸೋಲಿಸಿತು.