ಕುಶಾಲನಗರ, ಏ. 23: ಕುಶಾಲನಗರದ ವಾಸವಿ ಯುವಜನ ಸಂಘದ ಆಶ್ರಯದಲ್ಲಿ ವಾಸವಿ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟ ನಡೆಯಿತು. ಸ್ಥಳೀಯ ಜಿಎಂಪಿ ಶಾಲಾ ಮೈದಾನದಲ್ಲಿ ಆರ್ಯ ವೈಶ್ಯ ಜನಾಂಗದ ಯುವಕರ 4 ತಂಡಗಳ ನಡುವೆ ಪಂದ್ಯಾಟ ನಡೆಯಿತು.

ಆರ್ಯ ವೈಶ್ಯ ಮಂಡಳಿಯ ಅಧ್ಯಕ್ಷ ಬಿ.ಎಲ್.ಸತ್ಯನಾರಾಯಣ ಪಂದ್ಯಾವಳಿಯನ್ನು ಉದ್ಘಾಟಿಸಿದರು. ಫೈನಲ್ ಪಂದ್ಯವನ್ನು ಕೊಡಗು ಭಜನಾ ಮಂಡಳಿಗಳ ಒಕ್ಕೂಟದ ಉಪಾಧ್ಯಕ್ಷೆ ಲತಾ ರಮೇಶ್ ಬ್ಯಾಟ್ ಮಾಡುವದರ ಮುಖಾಂತರ ಚಾಲನೆ ನೀಡಿದರು. ಆರ್ಯ ವೈಶ್ಯ ಮಂಡಳಿಯ ಉಪಾಧ್ಯಕ್ಷ ವಿ.ಪಿ.ನಾಗೇಶ್, ವಾಸವಿ ಯುವಜನ ಸಂಘದ ಕಾರ್ಯದರ್ಶಿ ಅರ್ಜುನಗುಪ್ತ, ಉಪಾಧ್ಯಕ್ಷ ಪ್ರವೀಣ್, ಕ್ರೀಡಾ ಕಾರ್ಯದರ್ಶಿ ಕಾರ್ತಿಕ್, ಸಹ ಕಾರ್ಯದರ್ಶಿ ತೇಜಸ್, ಮಾಜಿ ಅಧ್ಯಕ್ಷ ಕೆ.ಜೆ.ರಮೇಶ್, ಸಜನ್, ಕಿಶನ್ ಚಿಣ್ಣಿ, ನಾಗಾ ಸಂತೋಷ್, ಬಾಲಾಜಿ, ಅನೂಪ್ ಚಕ್ರವರ್ತಿ, ಮುಕುಂದ ಶ್ರೇಷ್ಠಿ ಮತ್ತಿತರರು ಇದ್ದರು.