ಭಾಗಮಂಡಲ, ಏ. 23: ಚೆಟ್ಟಿಮಾನಿಯಲ್ಲಿ ಗೌಡಕುಟುಂಬಗಳ ನಡುವೆ ನಡೆಯುತ್ತಿರುವ ಕೆದಂಬಾಡಿ ಕಪ್ ಕ್ರಿಕೆಟ್ ಪಂದ್ಯಾಟದ ನಾಲ್ಕನೇ ದಿನದ ಪಂದ್ಯದಲ್ಲಿ ಕರ್ಣಯ್ಯನ ತಂಡವು 45ರನ್ ಗಳಿಸಿ ಪಡನೋಳನ ತಂಡದ ವಿರುದ್ಧ ಜಯಗಳಿಸಿತು. ಎರಡನೇ ಪಂದ್ಯದಲ್ಲಿ ಪಾಂಡಿ ತಂಡವು 123 ರನ್ ಗಳಿಸಿದರೆ ಬಿದ್ರುಪಣೆ ತಂಡವು 48 ರನ್ ಗಳಿಸಿ 75ರನ್‍ಗಳ ಸೋಲನ್ನು ಅನುಭವಿಸಿತು. ಕಲ್ಲುಮುಟ್ಲು ಹಾಗೂ ದಂಬೆಕೋಡಿ ತಂಡಗಳ ನಡುವಿನ ಪಂದ್ಯದಲ್ಲಿ ದಂಬೆಕೋಡಿ ತಂಡವು 117 ರನ್ ಗಳಿಸಿತು.

ಕಲ್ಲುಮುಟ್ಲು ತಂಡವು 40 ರನ್‍ಗಳಿಸಿ 72ರನ್‍ಗಳ ಸೋಲನ್ನು ಅನುಭವಿಸಿತು. ಬಿಳಿಯಂಡ್ರ ತಂಡವು ಕರ್ಣಯ್ಯನ ತಂಡದ ವಿರುದ್ಧ 83 ರನ್ ಗಳಿಸಿತು. ಉತ್ತರವಾಗಿ ಆಡಿದ ಕರ್ಣಯ್ಯನ ತಂಡವು ಗೆಲುವು ಸಾಧಿಸಿತು. ಕಕ್ಕೆಚಾಲು ಹಾಗೂ ಕೊಳಂಬೆ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಕಕ್ಕೆಚಾಲು ತಂಡವು 68 ರನ್ ಗಳಿಸಿದರೆ ಕೊಳಂಬೆ ತಂಡವು 64 ರನ್‍ಗಳಿಸಿತು. ದಂಬೆಕೋಡಿ ಮತ್ತು ಪಾಂಡಿ ತಂಡಗಳ ನಡುವಿನ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ದಂಬೆಕೋಡಿ ತಂಡವು 120 ರನ್‍ಗಳಿಸಿತು. ಪಾಂಡಿ ತಂಡ 88 ರನ್ ಗಳಿಸಿ 38 ರನ್‍ಗಳ ಸೋಲನ್ನು ಅನುಭವಿಸಿತು. ಮುಂದಿನ ಹಂತಕ್ಕೆ ದಂಬೆಕೋಡಿ, ಕಕ್ಕೆಚಾಲು, ಹಾಗೂ ಕರ್ಣಯ್ಯನ ತಂಡಗಳು ಪ್ರವೇಶಿಸಿವೆ.