ಮಡಿಕೇರಿ, ಏ.23 : ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ರಚನೆಯಾಗಿ 25 ವರ್ಷಗಳು ತುಂಬಿದ ಹಿನ್ನೆಲೆಯಲ್ಲ್ಲಿ ಜೂ. 8 ಮತ್ತು 9 ರಂದು ಬೆಳ್ಳಿಹಬ್ಬವನ್ನು ಅದ್ಧೂರಿ ಮತ್ತು ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಲಾಗಿದೆ. ಗೋಣಿಕೊಪ್ಪಲಿನ ಕಾವೇರಿ ಕಾಲೇಜಿನಲ್ಲಿ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಪೆಮ್ಮಂಡ ಕೆ.ಪೊನ್ನಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಎಲ್ಲಾ ಸಮಾಜದ ಅಧ್ಯಕ್ಷರು, ಭಾಷಿಕ ಜನಾಂಗದ ಅಧ್ಯಕ್ಷರ ಸಮ್ಮುಖದಲ್ಲಿ ಬೆಳ್ಳಿಹಬ್ಬ ಆಚರಣೆಯ ಕುರಿತು ಚರ್ಚಿಸಲಾಯಿತು.ಮೇ 3 ರಂದು ಗೋಣಿಕೊಪ್ಪಲಿನ ಕಾವೇರಿ ಕಾಲೇಜಿನಲ್ಲಿ ಮತ್ತೊಮ್ಮೆ ಸಭೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳಲು ಸಭೆ ನಿರ್ಧರಿಸಿತು. ವಿಶೇಷ ಸ್ಮರಣ ಸಂಚಿಕೆಯನ್ನು ಅನಾವರಣ ಗೊಳಿಸುವದು, ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಕೊಡವ ಅಭಿಮಾನಿ ಗಳನ್ನು ಆಹ್ವಾನಿಸುವದು ಮತ್ತು ಬೆಳ್ಳಿಹಬ್ಬಕ್ಕೆ ಅಗತ್ಯವಿರುವ ಸಮಿತಿ ಗಳನ್ನು ರಚಿಸಲು ತೀರ್ಮಾನಿಸ ಲಾಯಿತು.
ಬೆಳ್ಳಿಹಬ್ಬವನ್ನು ಅರ್ಥಪೂರ್ಣ ವಾಗಿ ಆಚರಿಸಲು ಸರ್ವರು ಸಹಕಾರ ನೀಡಬೇಕೆಂದು ಅಕಾಡೆಮಿ ಅಧ್ಯಕ್ಷ ಪೆಮ್ಮಂಡ ಕೆ. ಪೊನ್ನಪ್ಪ ಮನವಿ ಮಾಡಿದರು.
ಮಡಿಕೇರಿ ಕೊಡವ ಸಮಾಜದ ನಿರ್ದೇಶಕÀ ನಂದೇಟಿರ ರಾಜಾ ಮಾದಪ್ಪ ಸ್ಮರಣ ಸಂಚಿಕೆ ರಚನೆಯ ಕುರಿತು ಸಲಹೆ ನೀಡಿದರು.
ಕೊಡವ ಭಾಷಾ ಪುಸ್ತಕಗಳ ಅನಾವರಣ, ಪುಸ್ತಕ ಪ್ರದರ್ಶನ ಮತ್ತು ಮಾರಾಟ, ಕೊಡವ ಸಾಂಪ್ರದಾಯಿಕ ವಸ್ತು ಪ್ರದರ್ಶನ, ಸೇನಾ ಸಾಧಕರು ಗಳಾದ ಮೇಜರ್ ಜನರಲ್ ಮತ್ತು ಲೆಫ್ಟಿನೆಂಟ್ ಜನರಲ್‍ಗಳ ಫೋಟೋ ಮುದ್ರಿಸುವದು ಸೇರಿದಂತೆ ಕೊಡವ ಭಾಷೆ, ಸಾಹಿತ್ಯ, ಸಂಸ್ಕøತಿಯ ಬೆಳವಣಿ ಗೆಗೆ ಪೂರಕವಾದ ಕಾರ್ಯಕ್ರಮಗÀಳನ್ನು ರೂಪಿಸುವಂತೆ ಹಿರಿಯರು ಮಾರ್ಗದರ್ಶನ ಮಾಡಿದರು.
ಅಕಾಡೆಮಿ ಮತ್ತು ಕೊಡವ ಸಮಾಜಗಳ ಪದಾಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದು, ಹಲವು ಸಲಹೆÉಗಳನ್ನು ನೀಡಿದರು.(ಮೊದಲ ಪುಟದಿಂದ) ಅಕಾಡೆಮಿಯ ಮಾಜಿ ಅಧ್ಯಕ್ಷ ಬಾಚರಣಿಯಂಡ ಅಪ್ಪಣ್ಣ, ಮಾಜಿ ಅಧ್ಯಕ್ಷೆ ಐಮುಡಿಯಂಡ ರಾಣಿ ಮಾಚಯ್ಯ, ಸದಸ್ಯರುಗಳಾದ ನಾಳಿಯಮ್ಮಂಡ ಉಮೇಶ್ ಕೇಚಮಯ್ಯ, ಮಂದಕ್‍ಮನೆ ಬಾಲಕೃಷ್ಣ, ಹಂಚೆಟ್ಟಿರ ಮನು ಮುದ್ದಪ್ಪ, ಬೊಳ್ಳಜಿರ ಬಿ.ಅಯ್ಯಪ್ಪ, ಅಜ್ಜಮಾಡ ಕುಶಾಲಪ್ಪ, ಹಂಚೆಟ್ಟಿರ ಫ್ಯಾನ್ಸಿ ಮುತ್ತಣ್ಣ, ಬಿ.ಎಮ್. ಬೆಳ್ಯಪ್ಪ, ಕೆ.ಎಸ್. ಶಾರದ, ಸುಳ್ಳಿಮಾಡ ಭವಾನಿ, ಆಂಗೀರ ಕುಸುಂ, ಆಪಟ್ಟಿರ ಟಾಟು ಮೊಣ್ಣಪ್ಪ, ಕಾವೇರಿ ಎಜುಕೇಶನ್ ಸೊಸೈಟಿ ಅಧ್ಯಕ್ಷ ಡಾ.ಅಜ್ಜಿನಿಕಂಡ ಗಣಪತಿ, ರಿಜಿಸ್ಟರ್ ಮೂಕಳಮಾಡ ಮೊಣ್ಣಪ್ಪ, ಕಾಲೇಜಿನ ಪ್ರಾಂಶುಪಾಲೆ ಉಷಾಲತಾ ಹಾಜರಿದ್ದು ಬೆಳ್ಳಿಹಬ್ಬಕ್ಕೆ ಸಂಪೂರ್ಣ ಸಹಕಾರ ನೀಡುವ ಭರವಸೆ ನೀಡಿದರು.
ಸಭೆಯನ್ನು ಉಮೇಶ್ ಕೇಚಮಯ್ಯ ನಿರೂಪಿಸಿದರು, ಪ್ರಾಸ್ತವಿಕವಾಗಿ ಕೊಡವ ಸಮಾಜದ ರಿಜಿಸ್ಟ್ರಾರ್ ಚಂದ್ರಹಾಸನ್ ರೈ ಮಾತನಾಡಿದರು.