ಸೋಮವಾರಪೇಟೆ, ಏ. 23: ಜೇಸಿ ಸಂಸ್ಥೆಯ ವಿಷನ್ ಟು ಸೈಲೆಂಟ್ ವರ್ಕರ್ ಕಾರ್ಯಕ್ರಮದಡಿ ಸ್ಥಳೀಯ ಸರ್ಕಾರಿ ಆಸ್ಪತ್ರೆಯ ನಾಲ್ಕನೇ ದರ್ಜೆ ನೌಕರ ತಿಮ್ಮಯ್ಯ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೇಸಿ ಸಂಸ್ಥೆಯ ಅಧ್ಯಕ್ಷ ಬಿ.ಜಿ. ಪುರುಷೋತ್ತಮ್ ವಹಿಸಿದ್ದರು. ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿ ಶಿವಪ್ರಸಾದ್, ಸಂಸ್ಥೆಯ ಜೇಸಿರೇಟ್ಸ್ ಅಧ್ಯಕ್ಷೆ ಸುಮಲತ ಪುರುಷೋತ್ತಮ್, ಕಾರ್ಯದರ್ಶಿ ಉಷಾರಾಣಿ ಗುರುಪ್ರಸಾದ್, ವಲಯ ಅಧಿಕಾರಿ ಮಾಯಾ ಗಿರೀಶ್, ಪೂರ್ವಾಧ್ಯಕ್ಷ ಕೆ.ಎ. ಪ್ರಕಾಶ್ ಉಪಸ್ಥಿತರಿದ್ದರು.