ಮಡಿಕೇರಿ, ಏ. 23: ಇಲ್ಲಿನ ಇಸ್ಕಾನ್ ಸಂಸ್ಥೆಯಿಂದ ತಾ. 27 ರಂದು 12ನೇ ವರ್ಷದ ಶ್ರೀ ಜಗನ್ನಾಥ್ ರಥಯಾತ್ರೆ ಮಹೋತ್ಸವ ನಡೆಯಲಿದೆ. ಅಂದು 5 ಗಂಟೆ ಉಷಾಕಾಲದಲ್ಲಿ ಮಹಾ ಮಂಗಳಾರತಿ, 7 ಗಂಟೆಗೆ ಗುರುಪೂಜೆ, ಮಧ್ಯಾಹ್ನ 1 ಗಂಟೆಗೆ ರಾಜಭೋಗ ಸಮರ್ಪಣೆ, 4 ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದೆ. ಇಸ್ಕಾನಿನ ಸನ್ಯಾಸಿಗಳಾದ ಭಕ್ತಿ ಗೌರವ ನಾರಾಯಣ ಮಹರಾಜ್ ಮತ್ತು ಗಣ್ಯರು ಭಾಗವಹಿಸಲಿದ್ದಾರೆ. 5 ಗಂಟೆಗೆ ರಥ ಉದ್ಘಾಟನೆಯೊಂದಿಗೆ ಗಣಪತಿ ಬೀದಿ, ಮಹದೇವಪೇಟೆ, ಚೌಕ್, ಖಾಸಗಿ ಬಸ್ ನಿಲ್ದಾಣ ಮೂಲಕ ಗಾಂಧಿ ಮೈದಾನದಲ್ಲಿ ರಾತ್ರಿ ಸಭೆಯೊಂದಿಗೆ ಸಾಂಸ್ಕøತಿಕ ಕಾರ್ಯಕ್ರಮ ಜರುಗಲಿದೆ.