ಮಡಿಕೇರಿ, ಏ. 23: ದಿ. ಎಲೈಟ್ ಇಂಡಿಯನ್ ಬಾಕ್ಸಿಂಗ್ ತಂಡ ಪ್ರಸ್ತುತ ಥೈಲ್ಯಾಂಡ್‍ನ ಬ್ಯಾಂಕಾಕ್‍ನಲ್ಲಿ ಜರುಗುತ್ತಿರುವ ಎಸ್‍ಬಿಸಿ ಏಷ್ಯನ್ ಬಾಕ್ಸಿಂಗ್ ಚಾಂಪಿಯನ್ ಶಿಪ್‍ನಲ್ಲಿ ಪಾಲ್ಗೊಂಡಿದೆ. ಭಾರತೀಯ ಬಾಕ್ಸಿಂಗ್ ತಂಡದ ಮುಖ್ಯ ತರಬೇತುದಾರರಾಗಿರುವ ದ್ರೋಣಾಚಾರ್ಯ ಪ್ರಶಸ್ತಿ ವಿಜೇತರಾದ ಕೊಡಗಿನ ಚೇನಂಡ ಕುಟ್ಟಪ್ಪ ಅವರ ನೇತೃತ್ವದಲ್ಲಿ ಈ ತಂಡ ತೆರಳಿದೆ.ಒಲಂಪಿಕ್ ಅರ್ಹತೆ ಹಾಗೂ ಸೆಪ್ಟೆಂಬರ್‍ನಲ್ಲಿ ಜರುಗಲಿರುವ ವಿಶ್ವ ಚಾಂಪಿಯನ್‍ಶಿಪ್‍ಗಾಗಿನ ಪ್ರಮುಖ ಪಂದ್ಯಾವಳಿ ಇದಾಗಿದೆ. ತಾ. 18 ರಿಂದ 27ರ ತನಕ ಇಲ್ಲಿ ಬಾಕ್ಸಿಂಗ್ ಸ್ಪರ್ಧೆ ಜರುಗಲಿದ್ದು, ಈಗಾಗಲೇ 10 ಬಾಕ್ಸಿಂಗ್ ಪಟುಗಳ ಪೈಕಿ ವಿವಿಧ ವಿಭಾಗದಲ್ಲಿ 9 ಮಂದಿ ಕ್ವಾರ್ಟರ್ ಫೈನಲ್ ತಲಪಿದ್ದಾರೆ.