ಮಡಿಕೇರಿ. ಏ. 23 : ಕೊಡಗು ಜಿಲ್ಲಾ ಬಂಟರ ಯುವ ಘಟಕದ ಆಶ್ರಯದಲ್ಲಿ ಸಮುದಾಯ ಬಾಂಧವರ ಜಿಲ್ಲಾಮಟ್ಟದ ಕ್ರೀಡಾಕೂಟ ಮೇ.11, 12ರಂದು ನಡೆಯಲಿದೆ. ಆ ಪ್ರಯುಕ್ತ ಕ್ರಿಕೆಟ್ ಹಾಗೂ ವಾಲಿಬಾಲ್ ಪಂದ್ಯಾವಳಿಯ ಟೈಸ್ ಪ್ರಕ್ರಿಯೆ ಇತ್ತೀಚೆಗೆ ನಡೆಯಿತು.
ಘಟಕದ ಅಧ್ಯಕ್ಷ ಶರತ್‍ಕುಮಾರ್ ಶೆಟ್ಟಿ ಅಧ್ಯಕ್ಷತೆಯಲ್ಲಿ ಹೊಟೇಲ್ ಸಮುದ್ರ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿವಿಧ ತಂಡಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು. ಕ್ರಿಕೆಟ್‍ಗೆ 25 ಹಾಗೂ ವಾಲಿಬಾಲ್‍ಗೆ 19 ತಂಡಗಳು ನೋಂದಣಿ ಮಾಡಿಕೊಂಡಿದ್ದು, ತಂಡದ ನಾಯಕ, ವ್ಯವಸ್ಥಾಪಕರ ಸಮ್ಮುಖದಲ್ಲಿ ಟೈಸ್ ಹಾಕಲಾಯಿತು. ಮಿಥುನ್ ರೈ ಹಾಗೂ ನಿಖಿಲ್ ಆಳ್ವಾ ಪ್ರಕ್ರಿಯೆ ನಡೆಸಿಕೊಟ್ಟರು.
ಪುರುಷ ಹಾಗೂ ಮಹಿಳೆಯರ ವಿಭಾಗದಲ್ಲಿ ಹಗ್ಗಜಗ್ಗಾಟ, ಮಹಿಳೆಯರಿಗೆ ಥ್ರೋಬಾಲ್ ಪಂದ್ಯಾಟ ಕೂಡಾ ಇದ್ದು ಅವುಗಳ ಟೈಸ್ ಅನ್ನು ಪಂದ್ಯಾವಳಿ ಸಂದರ್ಭ ನಿಗದಿ ಮಾಡಲಾಗುವದೆಂದು ಪ್ರಮುಖರು ತಿಳಿಸಿದರು.
ಕಾರ್ಯದರ್ಶಿ ಬಾಲಕೃಷ್ಣ ರೈ ಎರಡು ದಿನದ ಕಾರ್ಯಕ್ರಮಗಳ ಬಗ್ಗೆ ವಿವರಿಸಿದರು. ಪದಾಧಿಕಾರಿಗಳಾದ ಕಿಶೋರ್ ರೈ ಕತ್ತಲೆಕಾಡು, ಸುರೇಶ್ ರೈ, ದೀಪಕ್ ರೈ ಹಾಗೂ ಇತರರಿದ್ದರು.