ಸೋಮವಾರಪೇಟೆ, ಏ. 23: ದೆಹಲಿಯ ಐಸಿಹೆಚ್‍ಆರ್ ಸಂಸ್ಥೆ, ಸೋಂದ ಜಾಗೃತ ವೇದಿಕೆ, ಬೆಂಗಳೂರಿನ ಮಿಥಿಕ್ ಸೊಸೈಟಿ, ಕಾರವಾರದ ಇತಿಹಾಸ ತಿಳಿಯೋಣ ಬನ್ನಿ ಸಮೂಹ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಆಶ್ರಯದಲ್ಲಿ ಮೇ 4 ಮತ್ತು 5ರಂದು ಸೋಂದ ಸ್ವರ್ಣವಲ್ಲಿಯಲ್ಲಿ ನಡೆಯುವ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಚಾಮೇರ ದಿನೇಶ್ ಅವರು ಕೊಡಗು ಜಿಲ್ಲೆಯನ್ನು ಪ್ರತಿನಿಧಿಸಲಿದ್ದಾರೆ.
ರಾಜ್ಯಮಟ್ಟದ ಇತಿಹಾಸ ಸಮ್ಮೇಳನ, ಸೋದೆ ಸದಾಶಿವರಾಯ ಪ್ರಶಸ್ತಿ ಪ್ರದಾನ, ಮತ್ತು ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಭಾಗವಹಿಸುವ ದಿನೇಶ್ ಅವರು, ಕೊಡಗಿನ ಸಾಮಂತರು ಮತ್ತು ಅವರ ಕೊಡುಗೆಗಳು ವಿಷಯದ ಬಗ್ಗೆ ಪ್ರಬಂಧ ಮಂಡಿಸಲಿದ್ದಾರೆ.