ನಾಪೆÇೀಕ್ಲು, ಏ. 24: ಸಮೀಪದ ಅಂಕುರ್ ಪಬ್ಲಿಕ್ ಶಾಲೆ ಹಾಗೂ ನಾಪೆÇೀಕ್ಲು ಲಯನ್ಸ್ ಕ್ಲಬ್ ಸಹಯೋಗದೊಂದಿಗೆ ಅಂಕುರ್ ಶಾಲೆಯಲ್ಲಿ ‘ಬಿಯಾಂಡ್ ಬುಕ್ಸ್’ ಚಿತ್ರಕಲಾ ಶಿಬಿರ ನಡೆಯಿತು.
ರಾಜ್ಯಮಟ್ಟದ ಪ್ರಶಸ್ತಿ ಪಡೆದಿರುವ ಗೋಣಿಕೊಪ್ಪ ಸರಕಾರಿ ಮಾದರಿ ಪ್ರಾಥಮಿಕ ಶಾಲಾ ಶಿಕ್ಷಕ ಬಿ.ಆರ್. ಸತೀಶ್ ಅವರು ಚಿತ್ರಕಲಾ ತರಬೇತಿ ನೀಡಿದರು. ನಾಪೆÇೀಕ್ಲು ವ್ಯಾಪ್ತಿಯ ಶಾಲಾ ಮಕ್ಕಳು ಭಾಗವಹಿಸಿದ್ದರು. ಈ ಸಂದರ್ಭ ಲಯನ್ಸ್ ಅಧ್ಯಕ್ಷ ಮುಕ್ಕಾಟಿರ ವಿನಯ್, ಕಾರ್ಯದರ್ಶಿ ಕನ್ನಂಬಿರ ಸುಧಿ ತಿಮ್ಮಯ್ಯ, ಖಜಾಂಚಿ ಶ್ಯಾಮ್ ಬಿದ್ದಪ್ಪ, ಅಂಕುರ್ ಪಬ್ಲಿಕ್ ಶಾಲೆಯ ಅಧ್ಯಕ್ಷ ಕೇಟೋಳಿರ ರಾಜಾ ಚರ್ಮಣ್ಣ, ಕಾರ್ಯದರ್ಶಿ ರತ್ನಾ ಚರ್ಮಣ್ಣ, ಲಯನ್ಸ್ ಕ್ಲಬ್ ಸದಸ್ಯರು, ಶಿಕ್ಷಕ ವೃಂದ ಇದ್ದರು.