ಸಿದ್ದಾಪುರ, ಏ. 24: ಇತ್ತೀಚೆಗೆ ಜಿ.ಪಂ. ಅನುದಾನದಲ್ಲಿ ರೂ. 15 ಲಕ್ಷ ವೆಚ್ಚದಲ್ಲಿ ಸಿದ್ದಾಪುರದ ಕರಡಿಗೋಡು ರಸ್ತೆಯಲ್ಲಿ ಅಳವಡಿಸಲಾಗಿದ್ದ ಇಂಟರ್‍ಲಾಕ್ ಎದ್ದುಬಂದಿದ್ದು, ಕಳಪೆ ಕಾಮಗಾರಿ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಗ್ರಾಮಸ್ಥ ಕೃಷ್ಣ, ರಸ್ತೆಗೆ ಇಂಟರ್‍ಲಾಕ್ ಅಳವಡಿಸಿ ವಾರಗಳಲ್ಲೇ ಇಂಟರ್‍ಲಾಕ್ ಎದ್ದು ಬಂದಿದೆ. ಕೆಲವೆಡೆಗಳಲ್ಲಿ ಇಂಟರ್‍ಲಾಕ್ ಇಟ್ಟಿಗೆ ತುಂಡಾಗಿದೆ. ಭಾರೀ ವಾಹನಗಳು ಸಂಚರಿಸುವ ರಸ್ತೆಯಲ್ಲಿ ಇಂಟರ್‍ಲಾಕ್ ಅಳವಡಿಸಿರುವದು ಮೂರ್ಖತನವಾಗಿದ್ದು, ಕಾಮಗಾರಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿದರು.