ಸೋಮವಾರಪೇಟೆ, ಏ. 24: ಕಾಫಿ ಮಂಡಳಿ ವತಿಯಿಂದ 'ಫ್ಲೇವರ್ ಆಫ್ ಇಂಡಿಯಾ-ದಿ ಫೈನ್ ಕಪ್ ಅವಾರ್ಡ್ 2019' ಸ್ಪರ್ಧೆ ಆಯೋಜಿಸಲಾಗಿದ್ದು, ಕಾಫಿ ಬೆಳೆಗಾರರು ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು ಎಂದು ಸೋಮವಾರಪೇಟೆ ಕಾಫಿ ಮಂಡಳಿ ಹಿರಿಯ ಸಂಪರ್ಕಾಧಿಕಾರಿ ಮುರಳೀಧರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೆಳೆಗಾರರು ಬೆಳೆದ ಕಾಫಿ ಬೀಜದ ಮಾದರಿಗಳನ್ನು ನೀಡಬಹುದು. ಬಲ್ಕ ಅರೇಬಿಕ ಹಾಗೂ ರೋಬಸ್ಟಾ ಪಾರ್ಚ್‍ಮೆಂಟ್ ಮತ್ತು ಚೆರ್ರಿ ನೀಡಬೇಕು. ತಾ.29ರ ವರೆಗೆ ಮಾದರಿಗಳನ್ನು ಕಳುಹಿಸಬಹುದು. ಹೆಚ್ಚಿನ ಮಾಹಿತಿಗಾಗಿ ಸೋಮವಾರಪೇಟೆ ಕಾಫಿ ಮಂಡಳಿ ಅಥವಾ 9845013935,9448603794 ಸಂಪರ್ಕಿಸಬಹುದು.