ಭಾಗಮಂಡಲ, ಏ. 24: ಚೆಟ್ಟಿಮಾನಿಯಲ್ಲಿ ಗೌಡ ಕುಟುಂಬಗಳ ನಡುವೆ ನಡೆಯುತ್ತಿರುವ ಕೆದಂಬಾಡಿ ಕಪ್ ಕ್ರಿಕೆಟ್ ಪಂದ್ಯಾಟದ ಐದನೇ ದಿನದ ಪಂದ್ಯದಲ್ಲಿ ಅಮೆ ತಂಡವು ಯಾಪಾರೆ ತಂಡವನ್ನು ಎದುರಿಸಿತು. ಯಾಪಾರೆ ತಂಡವು 35 ರನ್ ಗಳಿಸಿದರೆ, ಅಮೆ ತಂಡವು ಯಾವದೇ ವಿಕೆಟ್ ನಷ್ಟವಿಲ್ಲದೆ 39 ರನ್ ಗಳಿಸಿ ಗೆಲವು ಸಾಧಿಸಿತು.
ದಂಬೆಕೋಡಿ ಬಿ ತಂಡವು ಕಾಂಗೀರ ತಂಡದ ವಿರುದ್ಧ 59 ರನ್ ದಾಖಲಿಸಿತು. ಕಾಂಗೀರ ತಂಡವು 2 ವಿಕೆಟ್‍ಗಳ ಜಯ ಸಾಧಿಸಿತು. ಪೈಕೆರ ತಂಡದ ವಿರುದ್ಧ ಕಾಸ್ಪಾಡಿ ತಂಡವು 59 ರನ್ ಗಳಿಸಿತು. ಉತ್ತರವಾಗಿ ಆಡಿದ ಪೈಕೆರ ತಂಡವು ಒಂದು ವಿಕೆಟ್ ನಷ್ಟಕ್ಕೆ ಗುರಿ ಸಾಧಿಸಿತು.
ಅಮೆ ತಂಡದ ವಿರುದ್ಧ ಕಾಂಗೀರ ತಂಡವು 6 ವಿಕೆಟ್ ನಷ್ಟಕ್ಕೆ 72 ರನ್ ಗಳಿಸಿತು. ಉತ್ತರವಾಗಿ ಆಡಿದ ಅಮೆ ತಂಡವು 40 ರನ್ ಗಳಿಸಿ 32 ರನ್‍ಗಳ ಸೋಲನ್ನು ಅನುಭವಿಸಿತು.
ಕೊಂಪುಳಿ ತಂಡದ ವಿರುದ್ಧ ಪೈಕೆರ ತಂಡ 89 ರನ್ ಗಳಿಸಿದರೆ, ಕೊಂಪುಳಿ ತಂಡವು 47 ರನ್ ಗಳಿಸಿ ಸೋಲನುಭವಿಸಿತು. ಪಾಲೂರು ಬಂದಡ್ಕ ತಂಡವು ಮೊದಲ ಬ್ಯಾಟಿಂಗ್ ಮಾಡಿ ಪಾಕ ಮುಕ್ಕಾಟಿರ ತಂಡದ ವಿರುದ್ಧ 55 ರನ್ ಗಳಿಸಿತು. ಐದು ಓವರ್‍ನಲ್ಲಿ ನಡೆದ ಪಂದ್ಯದಲ್ಲಿ ಪಾಕ ಮುಕ್ಕಾಟಿರ ತಂಡವು 27 ರನ್‍ಗಳ ಸೋಲನ್ನು ಅನುಭವಿಸಿತು. ಪಾಲಾರ್ ಬಂದಡ್ಕ ತಂಡವು 4 ವಿಕೆಟ್ ನಷ್ಟಕ್ಕೆ 64 ರನ್ ಗಳಿಸಿದರೆ ಕಟ್ಟೆಮನೆ ತಂಡವು 4 ವಿಕೆಟ್ ನಷ್ಟಕ್ಕೆ 55 ರನ್ ಗಳಿಸಿ ಸೋಲನುಭವಿಸಿತು.