ಸಿದ್ದಾಪುರ, ಏ. 24 : ನಿನ್ನೆ ರಾತ್ರಿ ಸುರಿದ ಭಾರೀ ಗಾಳಿ ಮಳೆಗೆ ಮೂರು ಮನೆಗಳಿಗೆ ಸಂಪೂರ್ಣ ಹಾನಿಯಾಗಿದ್ದು ಮಹಿಳೆಯೊಬ್ಬರು ಗಂಭೀರ ಗಾಯಗೊಂಡು ಹಲವರು ಪ್ರಾಣಾಪಾಯದಿಂದ ಪಾರಾದ ಘಟನೆ ಸಿದ್ದಾಪುರ ಮೈಸೂರು ರಸ್ತೆಯಲ್ಲಿ ನಡೆದಿದೆ.

ಸಂಜೆ ಮೋಡ ಕವಿದ ವಾತಾವರಣದೊಂದಿಗೆ ರಾತ್ರಿ ದಿಢೀರನೆ ಸುರಿದ ಧಾರಾಕಾರ ಗಾಳಿ, ಮಳೆಗೆ ಮೈಸೂರು ರಸ್ತೆಯ ಸುಜಯ್ ಎಂಬವರಿಗೆ ಸೇರಿದ ಲೈನ್ ಮನೆಯ ಮೂರು ಕುಟುಂಬಗಳು ಪ್ರಾಣಾಪಾಯದಿಂದ ಪಾರಾಗಿದ್ದು, ಪ್ರಜೀದಾ ಎಂಬ ಮಹಿಳೆಗೆ ಮನೆಯ ಮೇಲ್ಛಾವಣಿಯ ಸೀಟು ತಗುಲಿ ತಲೆಗೆ ಗಂಭೀರ ಗಾಯವಾಗಿದೆ. ಸಿದ್ದಾಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ

ಪ್ರೇಮಿ, ಬೇಬಿ, ಚಂದ್ರ ಎಂಬವರು ವಾಸವಾಗಿದ್ದ ಮನೆಯ ಮೇಲ್ಚಾವಣಿಗಳು ಸಂಪೂರ್ಣ ಹಾರಿ ಹೋಗಿದ್ದು ಭಾರೀ ನಷ್ಟ ಉಂಟಾಗಿದೆ. ಮನೆಯಲ್ಲಿದ್ದವರು ಮನೆಯಿಂದ ತಕ್ಷಣ ಹೊರಗೆ ಬಂದಿದ್ದಾರೆ.

ಮೂರು ಮನೆಗಳಲ್ಲಿ 10ಕ್ಕೊ ಹೆಚ್ಚು ಮಂದಿ ವಾಸವಾಗಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಸ್ಥಳೀಯರ ನೆರವಿನೊಂದಿಗೆ ಗಾಯಗೊಂಡ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.