ವೀರಾಜಪೇಟೆ, ಏ. 24: ವೀರಾಜಪೇಟೆಯ ಸರ್ವೋದಯ ಶಿಕ್ಷಣ ವಿದ್ಯಾ ಸಂಸ್ಥೆಯಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ದೂರ ಸಂಪರ್ಕ ಶಿಕ್ಷಣದ ಬಿ.ಎಡ್. ತರಬೇತಿ ಕಾರ್ಯಕ್ರಮವನ್ನು ಇಲ್ಲಿನ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಶೈಲ ಬೀಳಗಿ ಉದ್ಘಾಟಿಸಿದರು.
ಶಿಬಿರಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಶ್ರೀಶೈಲ ಇಂದಿನ ಸ್ಪರ್ಧಾಯುಗದಲ್ಲಿ ಶಿಕ್ಷಣ ಹಾಗೂ ಕಂಪ್ಯೂಟರ್ ಜ್ಞಾನದ ಅನಿವಾರ್ಯತೆಯನ್ನು ತಿಳಿಸಿದರು. ವಿದ್ಯಾಸಂಸ್ಥೆಯ ಅಧ್ಯಕ್ಷೆ ಸೂರ್ಯಕುಮಾರಿ, ಪ್ರಾಂಶುಪಾಲೆ ಡಾ. ಎಂ. ವಾಣಿ, ಪ್ರಾಧ್ಯಾಪಕರುಗಳಾದ ಹೆಚ್.ಆರ್. ಗಿರೀಶ್, ಕೆ.ಜೆ. ಮಿನಿ, ಡಿ. ಪದ್ಮಲತಾ ಹಾಗೂ ಆರ್.ಸುಜಾತ ಹಾಜರಿದ್ದರು.
ದೂರ ಸಂಪರ್ಕ ಶಿಕ್ಷಣದ ತರಬೇತಿಯಲ್ಲಿ 100 ಮಂದಿ ವಿದ್ಯಾರ್ಥಿಗಳು ಭಾಗವಹಿಸಿದ್ದರು.