ಶನಿವಾರಸಂತೆ, ಏ. 24: ತ್ಯಾಗರಾಜ ಕಾಲೋನಿಯ ಶ್ರೀ ವಿಜಯ ವಿನಾಯಕ ದೇವಸ್ಥಾನದ 4ನೇ ವರ್ಷದ ವಾರ್ಷಿಕೋತ್ಸವ ತಾ. 26 ರಂದು ಪುತ್ತೂರಿನ ಕೆಮ್ಮಿಂಜೆಯ ತಂತ್ರಿಗಳಾದ ಬ್ರಹ್ಮಶ್ರೀ ಶ್ರೀ ಸುಬ್ರಮಣ್ಯ ಬಳ್ಳಕ್ಕುರಾಯ ಮತ್ತು ದೇವಸ್ಥಾನದ ಅರ್ಚಕ ಮಂಜುನಾಥ್ ಶರ್ಮಾ ಇವರ ನೇತೃತ್ವದಲ್ಲಿ ನಡೆಯಲಿದೆ. ಬೆಳಿಗ್ಗೆ 9 ಗಂಟೆಯಿಂದ ಮಹಾಗಣಪತಿ ಹೋಮ, ಕಲಶಪೂಜೆ, ಕಲಶಾಭಿಷೇಕ, ಮಹಾಮಂಗಳಾರತಿ ನಂತರ ತೀರ್ಥ ಪ್ರಸಾದ ವಿನಿಯೋಗ, ಸಂಜೆ 6 ಗಂಟೆಯಿಂದ ರಂಗಪೂಜೆ, 7.30 ಗಂಟೆಗೆ ಮಹಾಮಂಗಳಾರತಿ ನಂತರ ರಾತ್ರಿ 8 ಗಂಟೆಗೆ ಅನ್ನದಾನ ನಡೆಯಲಿದೆ.

ನಾಲ್ಕನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಶ್ರೀ ವಿಜಯ ವಿನಾಯಕ ಸ್ವಾಮಿಗೆ ಕಲಶಾಭಿಷೇಕ ನಡೆಯಲಿರುವದರಿಂದ ಕಲಶ ಮೆರವಣಿಗೆ ಏರ್ಪಡಿಸಿದ್ದು, ಶುಕ್ರವಾರ ಬೆಳಿಗ್ಗೆ 6.30 ಗಂಟೆಗೆ ನಡೆಯಲಿದೆ.