ಮಡಿಕೇರಿ, ಏ. 24: ಪುಟಾಣಿ ನಗರ ಬಡಾವಣೆಯಲ್ಲಿರುವ ಶ್ರೀ ದುರ್ಗಾಪರಮೇಶ್ವರಿ ದೇವಾಲಯದ 29ನೇ ವರ್ಷದ ವಾರ್ಷಿಕ ಮಹೋತ್ಸವ ತಾ. 26 ರಂದು ನಡೆಯಲಿದೆ.
ಬೆಳಿಗ್ಗೆ 6.30 ಗಂಟೆಗೆ ದೇವಿಯ ಕಲಶ ಪೂಜೆ, 9 ಗಂಟೆಯಿಂದ ಗಣಪತಿ ಹವನ, ಕುಂಕುಮಾರ್ಚನೆ ನಡೆಯಲಿದ್ದು, ಪೂರ್ವಾಹ್ನ 11.30ಕ್ಕೆ ಮಹಾಪೂಜೆ ಹಾಗೂ ಮಹಾಮಂಗಳಾರತಿ, ಮಧ್ಯಾಹ್ನ 3 ಗಂಟೆಯಿಂದ ಅನ್ನಸಂತರ್ಪಣೆ ನಡೆಯಲಿದೆ.