ಗೋಣಿಕೊಪ್ಪ ವರದಿ, ಏ. 24: ಮೈಸೂರು ಕೊಡವ ಸಮಾಜ ಕಲ್ಚರಲ್ ಅಯಿಂಡ್ ಸ್ಪೋಟ್ರ್ಸ್ ಕ್ಲಬ್ ಹಾಗೂ ಮೈಸೂರು ಬ್ಯಾಡ್‍ಮಿಂಟನ್ ಅಸೋಸಿ ಯೇಷನ್ ವತಿಯಿಂದ ಕಿರಿಯರ ಜಿಲ್ಲಾಮಟ್ಟದ ಬ್ಯಾಡ್‍ಮಿಂಟನ್ ಸಿಂಗಲ್ಸ್ ಟೂರ್ನಿಯಲ್ಲಿ ಕೊಡಗು ತಂಡಕ್ಕೆ 5 ಬಹುಮಾನ ಲಭಿಸಿದೆ. ಬೊಪ್ಪಂಡ ದಿಯಾ ಭೀಮಯ್ಯ ಹಾಗೂ ಆರಾಧನಾ ಬಾಲಚಂದ್ರ ತಲಾ ಎರಡು ಬಹುಮಾನ ಪಡೆಯುವ ಮೂಲಕ ಸಾಧನೆ ಮಾಡಿದ್ದಾರೆ.
ಕೊಡವ ಸಮಾಜ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಟೂರ್ನಿಯಲ್ಲಿ ಕೂರ್ಗ್ ಬ್ಯಾಡ್ ಮಿಂಟನ್ ಅಸೋಸಿ ಯೇಷನ್ ವತಿ ಯಿಂದ 11 ಸ್ಪರ್ಧಿ ಗಳು ಪಾಲ್ಗೊಂಡು, ಐವರು ಕ್ರೀಡಾ ಪಟುಗಳು 7 ಬಹುಮಾನ ಗಳಿಸಿದ್ದಾರೆ. 13 ವಯೋಮಿತಿ ಬಾಲಕಿಯರ ವಿಭಾಗದಲ್ಲಿ ಬೊಪ್ಪಂಡ ದಿಯಾ ಭೀಮಯ್ಯ ದ್ವಿತೀಯ, ಬಾಲಕರಲ್ಲಿ ಗ್ಯಾನ್ ಕಾವೇರಪ್ಪ ದ್ವಿತೀಯ, 15 ವಯೋಮಿತಿಯ ಬಾಲಕಿಯರಲ್ಲಿ ಆರಾಧನಾ ಬಾಲಚಂದ್ರ ಪ್ರಥಮ, ಬೊಪ್ಪಂಡ ದಿಯಾ ಭೀಮಯ್ಯ ದ್ವಿತೀಯ, ಬಾಲಕರಲ್ಲಿ ಶಮಂತ್ ಸುಬ್ಬಯ್ಯ ಪ್ರಥಮ, ಕಶ್ಯಪ್ ನಂಜಪ್ಪ ದ್ವಿತೀಯ, 17 ವಯೋಮಿತಿಯ ಬಾಲಕಿಯರಲ್ಲಿ ಆರಾಧನಾ ಬಾಲಚಂದ್ರ ಪ್ರಥಮ ಬಹುಮಾನ ಗಳಿಸಿದರು.
ಕೊಡಗು ತಂಡದಲ್ಲಿ ಉಳಿದಂತೆ ವಿಶಾಲ್ ಉತ್ತಪ್ಪ, ಆಧ್ಯಾ, ಅನನ್ಯ ಲೋಬೋ, ತ್ರಿಷಾ, ಬಿನಹ ಹಾಗೂ ನಿಲೀಶಾ ಭಾಗವಹಿಸಿದ್ದರು.