ಚೆಟ್ಟಳ್ಳಿ, ಏ. 24: ವೀರಾಜಪೇಟೆ ಸಮೀಪದ ಕಡಂಗದ ಪ್ರೌಢ ಶಾಲಾ ಮೈದಾನದಲ್ಲಿ ಅರಫಾ ಫ್ರೆಂಡ್ಸ್ ಕಡಂಗ ಇವರ ಆಶ್ರಯದಲ್ಲಿ ನಡೆಯುತ್ತಿರುವ 16 ನೇ ವರ್ಷದ ಕೊಡಗು ಮುಸ್ಲಿಂ ಕಪ್ ಕ್ರಿಕೆಟ್ ಪಂದ್ಯಾಟದಲ್ಲಿ ಕೆವೈಸಿಸಿ ಕಡಂಗ ಹಾಗೂ ಹಳೆ ತಾಲೂಕು ತಂಡಗಳು ಕ್ವಾರ್ಟರ್ ಫೈನಲ್‍ಗೆ ಅರ್ಹತೆ ಪಡೆದುಕೊಂಡಿವೆ.

ಸೌತ್ ಇಲವೆನ್ ಅಮ್ಮತ್ತಿ ಹಾಗೂ ಬದ್ರಿಯಾ ತಂಡಗಳ ನಡುವಿನ ಪಂದ್ಯಾಟದಲ್ಲಿ ಮೊದಲು ಬ್ಯಾಟ್ ಮಾಡಿದ ಅಮ್ಮತ್ತಿ ತಂಡವು ನಿಗದಿತ 5 ಓವರ್‍ಗಳಿಗೆ 47 ರನಗಳಿಸಿತು.ಈ ಗುರಿಯನ್ನು ಬೆನ್ನಟ್ಟಿದ ಬದ್ರಿಯಾ ತಂಡವು 40 ರನ್ ಗಳಿಸಲಷ್ಟೇ ಶಕ್ತರಾದರು.ಅಮ್ಮತ್ತಿ ತಂಡವು 6 ರನ್‍ಗಳ ರೋಚಕ ಗೆಲುವು ಸಾಧಿಸಿತು.

ಎರಡನೇ ಪಂದ್ಯಾಟದಲ್ಲಿ ಬ್ಲೂ ಬಾಯ್ಸ್ ಹಾಗೂ ಕೆವೈಸಿಸಿ ಕಡಂಗ ತಂಡಗಳ ನಡುವಿನ ಪಂದ್ಯಾಟದಲ್ಲಿ ಬ್ಲೂ ಬಾಯ್ಸ್ ತಂಡವು 5 ಓವರ್‍ಗಳಿಗೆ 22 ರನ್ ಗಳಿಸಿತು. ಕೆವೈಸಿಸಿ ಕಡಂಗ ತಂಡವು 9 ವಿಕೆಟ್‍ಗಳ ಗೆಲವು ಕಂಡಿತು.

ಆರ್.ವೈ.ಸಿ ಚೆರಿಯಪರಂಬು ಹಾಗೂ ಫ್ರೆಂಡ್ಸ್ ಮೂರ್ನಾಡು ತಂಡಗಳ ನಡುವಿನ ಪಂದ್ಯಾಟದಲ್ಲಿ ಮೊದಲು ಬ್ಯಾಟ್ ಮಾಡಿದ ಮೂರ್ನಾಡು 5 ಓವರ್‍ಗೆ 46 ರನ್ ಪೇರಿಸಿತು. ಚೆರಿಯಪರಂಬು ತಂಡವು 9 ವಿಕೆಟ್‍ಗಳ ಗೆಲವು ಸಾಧಿಸಿತು.

ನಾಲ್ಕನೇ ಪಂದ್ಯಾಟವು ಬೋಯಿಕೇರಿ ಹಾಗೂ ಅಯ್ಯಂಗೇರಿ ತಂಡಗಳ ನಡುವೆ ನಡೆಯಿತು. ಮೊದಲು ಬ್ಯಾಟ್ ಮಾಡಿದ ಬೋಯಿಕೇರಿ ತಂಡವು 5 ಓವರ್‍ನಲ್ಲಿ 34 ರನ್ ಗಳಿಸಿದರು.

ಅಯ್ಯಂಗೆÉೀರಿ ತಂಡವು ನಾಲ್ಕನೇ ಓವರ್‍ನಲ್ಲೇ ಗುರಿ ತಲುಪುವಲ್ಲಿ ಯಶಸ್ವಿಯಾದರು.

ಹಾಕತ್ತೂರು ಹಾಗೂ ಸುಂಟಿಕೊಪ್ಪ ನಡುವಿನ ಪಂದ್ಯಾಟದಲ್ಲಿ ಆಲ್ಫಾ ತಂಡವು 5 ಓವರ್‍ಗೆ 40 ರನ್ ಗಳಿಸಿತು.

ಹಾಕತ್ತೂರು ತಂಡವು 8 ವಿಕೆಟ್‍ಗಳ ಗೆಲವು ಸಾಧಿಸಿತು.

ಆತಿಥೇಯ ಅರಫಾ ಹಾಗೂ ಚಿಟ್ಟಡೆ ತಂಡಗಳ ನಡುವಿನ ಪಂದ್ಯಾಟದಲ್ಲಿ ಮೊದಲು ಬ್ಯಾಟ್ ಮಾಡಿದ ಚಿಟ್ಟಡೆ ತಂಡವು 5 ಓವರ್‍ಗೆ 36 ರನ್ ಗಳಿಸಿತು. ಅರಫಾ ತಂಡವು 6 ವಿಕೆಟ್‍ಗಳ ಗೆಲವು ಕಂಡಿತು.

ಎರಡನೇ ಸುತ್ತಿನ ಮೊದಲ ಪಂದ್ಯಾಟವು ಕೆವೈಸಿಸಿ ಕಡಂಗ ಹಾಗೂ ಸೌತ್ ಇಲವೆನ್ ಅಮ್ಮತ್ತಿ ತಂಡಗಳ ನಡುವೆ ನಡೆಯಿತು.

ಮೊದಲು ಬ್ಯಾಟ್ ಮಾಡಿದ ಅಮ್ಮತ್ತಿ ತಂಡವು ನಿಗದಿತ 4 ಓವರ್‍ಗೆ 47 ರನ್ ಗಳಿಸಿತು. ಕೆ.ವೈ.ಸಿ.ಸಿ ತಂಡವು 8 ವಿಕೆಟ್‍ಗಳ ಅಮೋಘ ಗೆಲವು ಸಾಧಿಸಿ ಪ್ರಿ ಕ್ವಾರ್ಟರ್‍ಗೆ ಅರ್ಹತೆ ಪಡೆಯಿತು.

ಚೆರಿಯಪರಂಬು ಹಾಗೂ ಹಳೆ ತಾಲೂಕು ನಡುವಿನ ಪಂದ್ಯಾಟದಲ್ಲಿ ಮೊದಲು ಬ್ಯಾಟ್ ಮಾಡಿದ ಹಳೆ ತಾಲೂಕು ತಂಡವು 4 ಓವರ್‍ಗೆ 64 ರನ್ ಗಳಿಸಿತು. ಹಳೆ ತಾಲೂಕು ಗೆಲವು ಸಾಧಿಸಿ ಪ್ರಿ ಕ್ವಾರ್ಟಗೆ ಪ್ರವೇಶಿಸಿತು. ಕೊಡಗು ಮುಸ್ಲಿಂ ಕಪ್ ಕ್ರಿಕೆಟ್ 2019 ರ ಕ್ರೀಡಾಕೂಟದ ಮೊದಲ ಹ್ಯಾಟ್ರಿಕ್ ವಿಕೆಟ್‍ನ್ನು ಆತಿಥೇಯ ಅರಫಾ ತಂಡದ ರಾಶಿದ್ ಚಿಟ್ಟಡೆ ವಿರುದ್ಧದ ಪಂದ್ಯಾಟದಲ್ಲಿ ಪಡೆದು ತಂಡದ ಗೆಲವಿಗೆ ಕಾರಣರಾದರು.

ಅಲ್ಲದೇ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.

ಈ ಸಂದರ್ಭ ಮೊಹಮ್ಮದ್ ಕುಂಞÂ, ಆಯೋಜಕರಾದ ಅರಫಾ, ಸಮದ್, ಜುನೈದ್, ನೌಫಲ್, ಶಿಯಾಬ್ ಹಾಗೂ ಅಸ್ಕರ್ ಇದ್ದರು.

-ಕೆ.ಎಂ. ಇಸ್ಮಾಯಿಲ್ ಕಂಡಕರೆ