ಮಡಿಕೇರಿ, ಏ. 24: ಕೊಡಗು ಗೌಡ ಯುವ ವೇದಿಕೆ ವತಿಯಿಂದ ಹತ್ತು ಕುಟುಂಬ ಹದಿನೆಂಟು ಗೋತ್ರದ ಗೌಡ ಜನಾಂಗ ಬಾಂಧವರಿಗೆ ಆಯೋಜಿಸಲಾಗಿದ್ದ ಮುಕ್ತ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾಟ ಗೌಡ ಕ್ರಿಕೆಟ್ ಹಬ್ಬ 2019 ತಾ. 26 ರಿಂದ ನಡೆಯಬೇಕಿತ್ತು. ಕಾರಣಾಂತರಗಳಿಂದ ಮೇ 3 ರಿಂದ 5ರ ವರೆಗೆ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜು ಕ್ರೀಡಾಂಗಣದಲ್ಲಿ ನಡೆಸಲು ವೇದಿಕೆ ಸಮಿತಿ ತೀರ್ಮಾನಿಸಿದೆ.
ಈ ಕಾರ್ಯಕ್ರಮ ಮೂರು ದಿನಗಳ ಕಾಲ ನಡೆಯುತ್ತಿರುವದರಿಂದ ಮೊದಲು ಹೆಸರು ನೋಂದಾಯಿಸಿದ 32 ತಂಡಗಳಿಗೆ ಮಾತ್ರ ಆಡಲು ಅವಕಾಶ ಇರುತ್ತದೆ. ತಂಡಗಳ ಹೆಸರು ನೋಂದಾಯಿಸಿಕೊಳ್ಳಲು ತಾ. 26 ಕೊನೆಯ ದಿನವಾಗಿರುತ್ತದೆ.
ಹೆಚ್ಚಿನ ಮಾಹಿತಿಗೆ ಅಚ್ಚಲ್ಪಾಡಿ ಪ್ರಸಾದ್ 9481770780 ಇವರನ್ನು ಸಂಪರ್ಕಿಸಬಹುದಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.